ಕರ್ನಾಟಕ

karnataka

ETV Bharat / state

ಅಕ್ರಮ ಕಲ್ಯಾಣ ಮಂಟಪ ನಿರ್ಮಾಣ... ಸ್ಮಶಾನ ಹಿತರಕ್ಷಣಾ ಸಮಿತಿ ಆರೋಪ

ದೇವಸ್ಥಾನ ಟ್ರಸ್ಟ್ ನವರು ರುದ್ರಭೂಮಿ ಜಾಗವನ್ನು ಒತ್ತುವರಿ ಮಾಡಿ ತಮ್ಮ ಸ್ವಂತ ಆಸ್ತಿ ಎಂಬಂತೆ ದುರುಪಯೋಗಪಡಿಸಿಕೊಂಡು ಹಣ ನುಂಗಲು ಸಿದ್ಧವಾಗಿದ್ದಾರೆ ಎಂದು ಸ್ಮಶಾನ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮೋಹನ್ ರೆಡ್ಡಿ ಆರೋಪಿಸಿದರು.

By

Published : Mar 24, 2019, 5:11 AM IST

Updated : Mar 24, 2019, 6:40 AM IST

ಸ್ಮಶಾನ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮೋಹನ್ ರೆಡ್ಡಿ

ಶಿವಮೊಗ್ಗ : ಸಮಾಧಿಯ ಮೇಲೆ ಕಲ್ಯಾಣ ಮಂಟಪಗಳನ್ನು ಕಟ್ಟುವ ಕೆಲಸವನ್ನು ಗುಡ್ಡೇಕಲ್ ಬಾಲಸುಬ್ರಹ್ಮಣ್ಯ ದೇವಸ್ಥಾನ ಟ್ರಸ್ಟ್ ನವರು ಮಾಡುತ್ತಿದ್ದಾರೆ ಎಂದು ಸ್ಮಶಾನ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮೋಹನ್ ರೆಡ್ಡಿ ಆರೋಪಿಸಿದರು.

ಸ್ಮಶಾನ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮೋಹನ್ ರೆಡ್ಡಿ

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇವಸ್ಥಾನ ಟ್ರಸ್ಟ್ ನವರು ಗುಡ್ಡೇಕಲ್ ರುದ್ರ ಭೂಮಿಗೆ ಸಂಬಂಧಪಟ್ಟ ಪುರಾತನ ವಿಶ್ರಾಂತಿ ಕಟ್ಟಡವನ್ನು ನೆಲಸಮ ಮಾಡಿದ್ದಾರೆ. ದೇವಸ್ಥಾನಕ್ಕೆ ಸರ್ಕಾರ ಸ್ವಲ್ಪ ಜಾಗ ಕೊಟ್ಟಿದ್ದು ನಿಜ.ಆದರೆ ದೇವಸ್ಥಾನ ಜಾಗದಲ್ಲಿ ಕಟ್ಟಡಗಳು, ಸಮುದಾಯ ಭವನಗಳನ್ನು ಕಟ್ಟಿ, ದೇವಸ್ಥಾನದ ಪರಿಸರ ಹಾಳು ಮಾಡಿ. ರುದ್ರಭೂಮಿ ಜಾಗವನ್ನು ಒತ್ತುವರಿ ಮಾಡಿ ತಮ್ಮ ಸ್ವಂತ ಆಸ್ತಿ ಎಂಬಂತೆ ದುರುಪಯೋಗಪಡಿಸಿಕೊಂಡು ಹಣ ನುಂಗಲು ಸಿದ್ಧವಾಗಿದ್ದಾರೆ ಎಂದು ಆರೋಪಿಸಿದರು.

ನ್ಯಾಯ ಕೇಳಲು ಹೋಗಿದ್ದಕ್ಕೆ ನಮ್ಮ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿದ್ದಾರೆ.ಹಾಗಾಗಿ ದೇವಸ್ಥಾನ ಸಮಿತಿಯ ರಾಜಶೇಖರ್ ಮತ್ತು ಎಂಪಿ ಸಂಪತ್ ಇವರುಗಳ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದರು.

Last Updated : Mar 24, 2019, 6:40 AM IST

ABOUT THE AUTHOR

...view details