ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಕೊರೊನಾ ಇಲ್ಲದಿದ್ದರೂ ಮನೆ ಮನೆ ಆರೋಗ್ಯ ಸಮೀಕ್ಷೆ: ಜಿಲ್ಲಾಧಿಕಾರಿ - 13 ಲಕ್ಷಕ್ಕೂ ಅಧಿಕ ಜನರ ಆರೋಗ್ಯ ಸಮೀಕ್ಷೆ

ಶಿವಮೊಗ್ಗದಲ್ಲಿ ಕೊರೊನಾ ಹರಡದೇ ಇದ್ದರೂ ಸಹ ಕೊರೊನಾ ವೈರಸ್ ಇದೆಯೋ ಇಲ್ಲವೋ ಎಂಬುದನ್ನು ತಿಳಿಯುವ ಸಲುವಾಗಿ ಆಶಾ ಕಾರ್ಯಕರ್ತೆಯರಿಂದ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತಿದೆ. ಈ ವೇಳೆ ಹೆಚ್ಚು ದಿನಗಳಿಂದ ಕೆಮ್ಮು, ಜ್ವರ, ಗಂಟಲು ನೋವಿನಿಂದ ಬಳಲುತ್ತಿದ್ದವರ ಮಾಹಿತಿ ಪಡೆದು ಆರೋಗ್ಯ ಇಲಾಖೆಗೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾಧಿಕಾರಿ ಶಿವಕುಮಾರ್
ಜಿಲ್ಲಾಧಿಕಾರಿ ಶಿವಕುಮಾರ್

By

Published : Apr 24, 2020, 5:22 PM IST

ಶಿವಮೊಗ್ಗ:ಕೊರೊನಾ ಹಿನ್ನೆಲೆ ಜಿಲ್ಲೆಯಾದ್ಯಂತ 13 ಲಕ್ಷಕ್ಕೂ ಅಧಿಕ ಜನರ ಆರೋಗ್ಯ ಸಮೀಕ್ಷೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಜಿಲ್ಲೆಯಲ್ಲಿ ಹರಡದೆ ಇದ್ದರೂ ಸಹ ಕೊರೊನಾ ವೈರಸ್ ಇದೆಯೋ ಇಲ್ಲವೋ ಎಂಬುದನ್ನು ತಿಳಿಯುವ ಸಲುವಾಗಿ ಆಶಾ ಕಾರ್ಯಕರ್ತೆಯರಿಂದ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತಿದೆ. ಈ ವೇಳೆ ಹೆಚ್ಚು ದಿನಗಳಿಂದ ಕೆಮ್ಮು, ಜ್ವರ, ಗಂಟಲು ನೋವಿನಿಂದ ಬಳಲುತ್ತಿದ್ದವರ ಮಾಹಿತಿ ಪಡೆದು ಆರೋಗ್ಯ ಇಲಾಖೆಗೆ ತಿಳಿಸಲಾಗಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ

ಗರ್ಭಿಣಿಯರು, ಹೆಚ್​ಐವಿ ಪೀಡಿತರು, ಡಯಾಬಿಟಿಸ್ ಸೇರಿದಂತೆ 60 ವರ್ಷ ಮೇಲ್ಪಟ್ಟವರನ್ನು ಮೂರು ದಿನಕ್ಕೊಮ್ಮೆ ಸಮೀಕ್ಷೆ ನಡೆಸಲು ಆಶಾ ಕಾರ್ಯಕರ್ತೆಯರಿಗೆ ಸೂಚಿಸಲಾಗಿದೆ. ಲಾಕ್​ಡೌನ್ ಹಿನ್ನೆಲೆ ಯಾವುದೇ ಸಡಿಲಿಕೆಯನ್ನು ಸರ್ಕಾರ ಮಾಡಿಲ್ಲ. ಆದರೆ ಕೆಲವೊಂದು ಚಟುವಟಿಕೆ ನಡೆಸಲು ಹೆಚ್ಚುವರಿಯಾಗಿ ಅವಕಾಶ ನೀಡಲಾಗಿದೆ. ಕೃಷಿ ಚಟುವಟಿಕೆ ಸಂಬಂಧಿತ ಅಂಗಡಿಗಳಿಗೆ, ಎಲೆಕ್ಟ್ರಾ‌ನಿಕ್ ರಿಪೇರಿ, ಪ್ಲಂಬರ್ ಕಾರ್ಯಕ್ಕೆ ಅವಕಾಶ ನೀಡಲಾಗಿದೆ. ಸ್ವಯಂ ಉದ್ಯೋಗ ನಡೆಸುವ ರಿಪೇರಿ ಮಾಡುವವರು ಅಂಗಡಿ ತೆರೆಯಬಹುದಾಗಿದೆ ಎಂದು ತಿಳಿಸಿದರು.

ಯಾರೇ ಆದರೂ‌ ವ್ಯಕ್ತಿಯಿಂದ ವ್ಯಕ್ತಿಗೆ ಅಂತರ ಕಾಪಾಡಿಕೊಳ್ಳಬೇಕಿದೆ. ಗಾಂಧಿ ಬಜಾರ್​ನಲ್ಲಿ ಸೋಮವಾರದಿಂದ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ‌ನೀಡಲಾಗುವುದು. ಬೈಕ್​ನಲ್ಲಿ ಒಬ್ಬರು ಮಾತ್ರ ಸಂಚಾರ ಮಾಡಬೇಕು ಎಂದು ತಿಳಿಸಿದ್ದಾರೆ.

ABOUT THE AUTHOR

...view details