ಶಿವಮೊಗ್ಗ:ಸಮಾಜದಲ್ಲಿ ನಡೆಯುವ ದುಷ್ಕೃತ್ಯಗಳನ್ನು ಪತ್ತೆ ಹಚ್ಚಿ, ಮುಂದೆ ನಡೆಯಬಹುದಾದ ವಿದ್ವಂಸಕ ಕೃತ್ಯಗಳನ್ನು ತಡೆಯಲು ಗೃಹ ಇಲಾಖೆಯು ಕೆಲ ಜಿಲ್ಲೆಗಳಲ್ಲಿ ವಿಶೇಷವಾಗಿ ಆಂತರಿಕ ಭದ್ರತಾ ವಿಭಾಗ ಸ್ಥಾಪನೆ ಮಾಡಿರುತ್ತದೆ. ಇಂತಹ ಒಂದು ಕಚೇರಿ ಶಿವಮೊಗ್ಗದಲ್ಲೂ ಸಹ ಇತ್ತು. ಆದರೆ, ಅದು ಮೊನ್ನೆಯಿಂದ ಬಂದ್ ಆಗಿದೆ. ಈ ಕಚೇರಿಯನ್ನು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಅವರು ಬಂದ್ ಮಾಡಿಸಿದ್ದಾರೆ ಎನ್ನಲಾಗ್ತಿದೆ.
ಹೌದು, ಮೊನ್ನೆ ಶಿವಮೊಗ್ಗಕ್ಕೆ ಬಂದಿದ್ದ ಭಾಸ್ಕರ್ ರಾವ್ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಚೇರಿ ಸಿಬ್ಬಂದಿಯ ಕಾರ್ಯಕ್ಷಮತೆಯಿಂದ ತೃಪ್ತಿಯಾಗದೇ ನಿಮಗೆ ಕಚೇರಿ ಏಕೆ ಬೇಕು ಅಂತ ಬೀಗ ಹಾಕಿಸಿ ಹೋಗಿದ್ದಾರೆ ಎನ್ನಲಾಗ್ತಿದೆ. ಮಂಗಳೂರಿನಲ್ಲಿ ದೇಶ ದ್ರೋಹಿ ಗೋಡೆ ಬರಹದ ಹಿಂದೆ ಇದ್ದ ಓರ್ವನಿಗೆ ತೀರ್ಥಹಳ್ಳಿಯಲ್ಲಿ ಆಶ್ರಯ ನೀಡಿದ್ದವನನ್ನು ಬಂಧಿಸಲಾಗಿದೆ.