ಶಿವಮೊಗ್ಗ :ಶಿವಮೊಗ್ಗ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆಯ ಮಾದರಿ ನೀತಿ ಸಂಹಿತೆ ಇಂದಿನಿಂದ ಜಾರಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ ಸೆಲ್ವಮಣಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂದರು.
ಜಿಲ್ಲೆಯ ಕ್ಷೇತ್ರವಾರು ಮತದಾರರ ವಿವರ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಪುರುಷರು- 1,04,610 ಮಹಿಳೆಯರು-1,05,768 ಹಾಗೂ ಇತರರು-4 ಸೇರಿ ಒಟ್ಟು -2,10,412 ಮತದಾರರಿದ್ದಾರೆ. ಭದ್ರಾವತಿ ಕ್ಷೇತ್ರ- ಪುರುಷರು-1,02,236, ಮಹಿಳೆಯರು-1,07,971 ಹಾಗೂ ಇತರೆ-5 ಸೇರಿ ಒಟ್ಟು -2,10,212 ಮತದಾರರಿದ್ದಾರೆ.
ಶಿವಮೊಗ್ಗ ನಗರ ಕ್ಷೇತ್ರದಲ್ಲಿ 1,25,942 ಪುರುಷರು, 1,31,729 ಮಹಿಳಾ ಮತದಾರರು ಹಾಗೂ ಇತರರು 13 ಜನ ಸೇರಿ ಒಟ್ಟು 2,57,685 ಮತದಾರರು ಇದ್ದಾರೆ. ತೀರ್ಥಹಳ್ಳಿ ಕ್ಷೇತ್ರದಲ್ಲಿ 92,141 ಪುರುಷರು, 94,453 ಮಹಿಳೆಯರು ಸೇರಿ 1,86,594 ಮತದಾರರಿದ್ದಾರೆ. ಶಿಕಾರಿಪುರ ದಲ್ಲಿ 9,91,29 ಪುರುಷರು, 9,83,11 ಮಹಿಳೆಯರು ಹಾಗೂ ಇತರರು 3 ಮತದಾರರು ಸೇರಿ ಒಟ್ಟು 1,97,443 ಮತದಾರರಿದ್ದಾರೆ.
ಸೊರಬ ಕ್ಷೇತ್ರದಲ್ಲಿ 97,674 ಪುರುಷ ಮತದಾರರು, 95,910 ಮಹಿಳಾ ಮತದಾರರು ಸೇರಿ ಒಟ್ಟು 1,93,584 ಮತದಾರರಿದ್ದಾರೆ. ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಪುರುಷರು -10,317, ಮಹಿಳೆಯರು-1,02,432 ಹಾಗೂ ಇತರರು 1 ಸೇರಿ ಒಟ್ಟು- 2,02,750 ಮತದಾರರಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ 14,58,680 ಮತದಾರರಿದ್ದಾರೆ.
ಜಿಲ್ಲೆಯ ಮತಗಟ್ಟೆಗಳ ವಿವರ: