ಕರ್ನಾಟಕ

karnataka

ETV Bharat / state

ಎಲ್ಲಾ ಇಲಾಖೆಗಳಲ್ಲಿ ಸಕಾಲ ಮಾಹಿತಿ ಫಲಕ ಕಡ್ಡಾಯ: ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ - shimogga latest news

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಕಾಲ ಯೋಜನೆಯ ಪ್ರಗತಿ ಪರಿಶೀಲನೆ ಸಭೆ ನಡೆದಿದ್ದು, ಸಕಾಲ ಯೋಜನೆಯಡಿ ಲಭ್ಯವಿರುವ ಸೇವೆಗಳ ವಿವರಗಳನ್ನು ಒಳಗೊಂಡ ಮಾಹಿತಿ ಫಲಕವನ್ನು ಎಲ್ಲಾ ಇಲಾಖೆಗಳು ಪ್ರಕಟಿಸಬೇಕೆಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದ್ರು.

Implement Sakala  information board in all departments: KB Sivakumar
ಎಲ್ಲಾ ಇಲಾಖೆಗಳಲ್ಲಿ ಸಕಾಲ ಮಾಹಿತಿ ಫಲಕ ಅಳವಡಿಸಿ: ಕೆ.ಬಿ ಶಿವಕುಮಾರ್

By

Published : Feb 7, 2020, 2:47 PM IST

ಶಿವಮೊಗ್ಗ:ಸಕಾಲ ಯೋಜನೆಯಡಿ ಲಭ್ಯವಿರುವ ಸೇವೆಗಳ ವಿವರಗಳನ್ನು ಒಳಗೊಂಡ ಮಾಹಿತಿ ಫಲಕವನ್ನು ಎಲ್ಲಾ ಇಲಾಖೆಗಳು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಕಾಲ ಯೋಜನೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಕೆ.ಬಿ. ಶಿವಕುಮಾರ್​, ಈಗಾಗಲೇ ಬಹುತೇಕ ಇಲಾಖೆಗಳು ಮಾಹಿತಿ ಫಲಕಗಳನ್ನು ಅಳವಡಿಸಿವೆ. ಫಲಕ ಅಳವಡಿಸದೇ ಇರುವ ಇಲಾಖೆಗಳು ಆದಷ್ಟು ಬೇಗನೆ ಅಳವಡಿಸಬೇಕು. ಕಳೆದ ತಿಂಗಳು ಜಿಲ್ಲೆ ಸಕಾಲ ಯೋಜನೆಯಡಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದು, ಮುಂದಿನ ದಿನಗಳಲ್ಲಿ ಸಹ ಈ ಮಟ್ಟವನ್ನು ಕಾಯ್ದುಕೊಳ್ಳಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಸಕಾಲ ಅಡಿಯಲ್ಲಿ ಸ್ವೀಕರಿಸಲಾಗಿರುವ ಅರ್ಜಿಗಳ ಸಂಖ್ಯೆ, ವಿಲೇವಾರಿ, ಬಾಕಿ ಉಳಿದಿರುವ ಅರ್ಜಿಗಳು ಸೇರಿದಂತೆ ಇತರೆ ವಿವರಗಳನ್ನು ಪ್ರತಿ ವಾರ ಪರಿಶೀಲಿಸಿ, ಕೆಳ ಹಂತದ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.

ಎಲ್ಲಾ ಇಲಾಖೆಗಳಲ್ಲಿ ಸಕಾಲ ಮಾಹಿತಿ ಫಲಕ ಅಳವಡಿಸಿ: ಕೆ.ಬಿ. ಶಿವಕುಮಾರ್

ಕೆಲವು ಇಲಾಖೆಗಳು ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿಗಳನ್ನು ಸಕಾಲ ಅಡಿ ಪರಿಗಣಿಸುತ್ತಿಲ್ಲ. ಕೆಲವು ಗ್ರಾಮ ಪಂಚಾಯತ್‍ಗಳು ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಸಕಾಲ ಅಡಿ ಅರ್ಜಿ ಸ್ವೀಕಾರ ಶೂನ್ಯವಾಗಿದ್ದು, ಇದರಿಂದ ಸಹ ರ್ಯಾಂಕಿಂಗ್ ಕಡಿಮೆಯಾಗುತ್ತಿದೆ. ಈ ಕುರಿತು ಸೂಕ್ತ ನಿರ್ದೇಶನಗಳನ್ನು ಇಲಾಖಾ ಮುಖ್ಯಸ್ಥರು ನೀಡಬೇಕು. ಸಕಾಲ ಅಡಿ ಅರ್ಜಿ ಸ್ವೀಕರಿಸಲು ಹಿಂದೇಟು ಹಾಕುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಹೇಳಿದರು.

ಇನ್ನು ಕಳೆದ ತಿಂಗಳು ಪ್ರಾದೇಶಿಕ ಸಾರಿಗೆ ಇಲಾಖೆ 568 ಅರ್ಜಿಗಳು, ಕಂದಾಯ ಇಲಾಖೆ 353, ಪೊಲೀಸ್ ಇಲಾಖೆ 99, ಗ್ರಾಮೀಣಾಭಿವೃದ್ಧಿ ಇಲಾಖೆ 77 ಮತ್ತು ನಗರ ಸ್ಥಳೀಯ ಸಂಸ್ಥೆಗಳು 57 ಅರ್ಜಿಗಳನ್ನು ಕಾಲಮಿತಿಯ ಒಳಗಾಗಿ ವಿಲೇವಾರಿ ಮಾಡಿಲ್ಲ. ಎಲ್ಲಾ ಇಲಾಖೆಗಳು ಕಾಲಮಿತಿಯ ಒಳಗಾಗಿ ಅರ್ಜಿಗಳನ್ನು ಕಡ್ಡಾಯವಾಗಿ ವಿಲೇವಾರಿ ಮಾಡಬೇಕು. ಅರ್ಜಿಗಳನ್ನು ಸೂಕ್ತ ಕಾರಣವಿಲ್ಲದೇ ತಿರಸ್ಕರಿಸಬಾರದು ಎಂದು ತಿಳಿಸಿದರು.

ABOUT THE AUTHOR

...view details