ಕರ್ನಾಟಕ

karnataka

ETV Bharat / state

ಮಹಿಳೆಯರ ರಕ್ಷಣೆಗೆ ನಿಂತವರಿಗೆ ಚಾಕು ಇರಿತ; ವಿಘ್ನೇಶ್ವರನ ನಿಮಜ್ಜನ ವೇಳೆ ಯುವಕರಿಂದ ನಡೆಯಿತು ದುಷ್ಕೃತ್ಯ... - ರಿಪ್ಪನ್ ಪೇಟೆ

ಗಣಪತಿ ನಿಮಜ್ಜನ  ಮೆರವಣಿಗೆಯಲ್ಲಿ ಮಕ್ಕಳು ಹಾಗೂ ಮಹಿಳೆಯರು ಡ್ಯಾನ್ಸ್ ಮಾಡುತ್ತಿರುವ ಸ್ಥಳಕ್ಕೆ ಬಂದ ಯುವಕರ ತಂಡವನ್ನ ತಡೆದ ಇಬ್ಬರು ಯುವಕರನ್ನು ಕೋಪದಲ್ಲಿ ಚಾಕುವಿನಿಂದ ಚುಚ್ಚಿರುವ ಘಟನೆ ಹೊಸನಗರ ತಾಲೂಕ್  ರಿಪ್ಪನ್ ಪೇಟೆ ಗ್ರಾಮದಲ್ಲಿ ನಡೆದಿದೆ.

ಮಹಿಳಾ ರಕ್ಷಕರಿಗೆ ಚಾಕು ಇರಿತ

By

Published : Sep 11, 2019, 5:56 AM IST

Updated : Sep 11, 2019, 7:23 AM IST

ಶಿವಮೊಗ್ಗ:ಗಣಪತಿ ನಿಮಜ್ಜನ ಮೆರವಣಿಗೆಯಲ್ಲಿ ಇಬ್ಬರು ಯುವಕರಿಗೆ ಚಾಕು ಇರಿತವಾಗಿರುವ ಘಟನೆ ಹೊಸನಗರ ತಾಲೂಕ್ ರಿಪ್ಪನ್ಪೇಟೆ ಗ್ರಾಮದಲ್ಲಿ ನಡೆದಿದೆ. ಸೂರ್ಯ ಹಾಗೂ ಕುಮಾರ್ ಚಾಕು ಇರಿತಕ್ಕೆ ಒಳಗಾದ ಯುವಕರಾಗಿದ್ದು, ಗಾಯಾಳುಗಳು‌ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗಳವಾರ ಸಂಜೆ ಪಟ್ಟಣದಲ್ಲಿ ಗಣಪತಿ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆಯಲ್ಲಿ ಮಕ್ಕಳು ಹಾಗೂ ಮಹಿಳೆಯರು ಡ್ಯಾನ್ಸ್ ಮಾಡುತ್ತಾ ಇದ್ದರು. ಈ ಸಮಯದಲ್ಲಿ ಕೆಲ ಪುಂಡ ಯುವಕರು ಡ್ಯಾನ್ಸ್ ಮಾಡಲು ಇವರತ್ತ ಬಂದಾಗ, ಸೂರ್ಯ ಹಾಗೂ ಕುಮಾರ ಆ ಯುವಕರನ್ನು ತಡೆದಿದ್ದಾರೆ.

ಇದಕ್ಕೆ ಕೋಪಗೂಂಡವರು ಸೂರ್ಯ ಹಾಗೂ ಕುಮಾರ್​ಗೆ ಚಾಕುವಿನಿಂದ ಹೊಟ್ಟೆ, ಬೆನ್ನಿಗೆ ಇರಿದಿದ್ದಾರೆ ಎಂದು ತಿಳಿದು ಬಂದಿದೆ. ಚಾಕು ಇರಿದ ಧನುಷ್​​ ಹಾಗೂ ಸುಜಿತ್ ರನ್ನು ಪೊಲೀಸರು ಬಂಧಿಸಿದ್ದು, ಜೋಸೆಫ್ ಎಂಬಾತ ಪರಾರಿಯಾಗಿದ್ದಾನೆ. ಈ ಕುರಿತು ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Sep 11, 2019, 7:23 AM IST

ABOUT THE AUTHOR

...view details