ಶಿವಮೊಗ್ಗ: ಸಾಗರದ ಹೀರೆನಲ್ಲೂರು ಮತ್ತು ನೀರುಗುಡಿ ಗ್ರಾಮದ ಮನೆಗಳಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಹಾಗೂ ಕಳ್ಳಭಟ್ಟಿ ಕೊಳೆಯನ್ನು ಅಬಕಾರಿ ಪೊಲೀಸರು ನಾಶ ಮಾಡಿದ್ದಾರೆ.
ಸಾಗರ: ಅಬಕಾರಿ ಪೊಲೀಸರಿಂದ ಅಕ್ರಮ ಕಳ್ಳಭಟ್ಟಿ, ಕೊಳೆ ನಾಶ - ಶಿವಮೊಗ್ಗ ಸುದ್ದಿ
ಮನೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಇರುವ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಕಳ್ಳಭಟ್ಟಿ ಹಾಗೂ ಕೊಳೆಯನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡು ನಾಶಪಡಿಸಿದ್ದಾರೆ.

ಅಕ್ರಮ ಕಳ್ಳಭಟ್ಟಿ ಹಾಗೂ ಕೊಳೆ ನಾಶ ಮಾಡಿದ ಅಬಕಾರಿ ಪೊಲೀಸರು
ಅಕ್ರಮ ಕಳ್ಳಭಟ್ಟಿ ಹಾಗೂ ಕೊಳೆ ನಾಶ ಮಾಡಿದ ಅಬಕಾರಿ ಪೊಲೀಸರು
ಸಾಗರ ತಾಲೂಕಿನ ಹೀರೆ ನಲ್ಲೂರು ಗ್ರಾಮದ ಅಣ್ಣಪ್ಪ ಹಾಗೂ ನೀರುಗುಡಿ ಗ್ರಾಮದ ಪರಶುರಾಮ ಅವರ ಮನೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಇರುವುದನ್ನು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಕಳ್ಳಭಟ್ಟಿ ಹಾಗೂ ಕೊಳೆಯನ್ನು ನಾಶಪಡಿಸಿದ್ದಾರೆ.
ದಾಳಿಯಲ್ಲಿ ಅಬಕಾರಿ ಇಲಾಖೆ ಪೊಲೀಸರಾದ ರಾಜಮ್ಮ, ರವೀಂದ್ರ ಪಾಟೀಲ, ಮುದಸೀರ್, ಗುರುಮೂರ್ತಿ, ದೀಪಕ್ ಸೇರಿ ಇತರರು ಹಾಜರಿದ್ದರು.