ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾರಿಗೂ ಪುಕ್ಸಟ್ಟೆ ಗ್ಯಾಸ್ ನೀಡಿದ್ರೆ, ನಾನೇ ಬಿಜೆಪಿಯವರಿಗೆ ಹಾರ ಹಾಕುತ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೂಂದಿಗೆ ಮಾತನಾಡಿದ ಅವರು, ಪ್ರಧಾನ ಮೋದಿ ಅವರು ಗ್ಯಾಸ್ ಸಿಲಿಂಡರ್ ಮೇಲೆ 200 ಸಬ್ಸಿಡಿ ನೀಡುವ ಬದಲು ಉಚಿತವಾಗಿ ಗ್ಯಾಸ್ ಸಿಲಿಂಡರ್ ಕೊಡುತ್ತೇನೆ ಎಂದಿದ್ದ ಮಾತನ್ನು ಉಳಿಸಿಕೊಳ್ಳಲಿ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆನೇಕ ಯೋಜನೆಗಳನ್ನು ಕೊಟ್ಟಿದೆ ಎಂದರು.
ಆ ಪಥದಲ್ಲಿ ಇವತ್ತು ಮತ್ತೊಂದು ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ವಿಶೇಷವಾಗಿ ಮಹಿಳೆಯರಿಗೆ ಜಾರಿ ಮಾಡಲಾಗಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದ್ದು, ಮನೆ ನಿರ್ವಹಣೆ ಮಾಡುವುದಕ್ಕೆ ಉಪಯೋಗವಾಗಲಿ ಎಂದು ಮನೆಯ ಯಜಮಾನಿಯರಿಗೆ 2000 ರೂ. ಗಳನ್ನು ಅವರ ಜೀವನಕ್ಕೆ ಕೊಡುತ್ತಿದ್ದೇವೆ. ವರ್ಷಕ್ಕೆ 24 ಸಾವಿರ ರೂ. ಗಳ ಜೊತೆಗೆ ಸ್ತ್ರೀ ಶಕ್ತಿ, ಅನ್ನಭಾಗ್ಯ, ಗೃಹಜೋತಿ ಯೋಜನೆಗಳನ್ನು ಕೂಡ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕೊಡುವುದಕ್ಕೆ ಆಗಲಿಲ್ಲವೆಂದರೂ ಮಾತು ಕೊಟ್ಟಂತೆ 174 ರೂ. ನೇರವಾಗಿ ಅವರ ಬ್ಯಾಂಕ್ ಖಾತೆಗೆ ಬರುವಂತ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಮಾಹಿತಿಯನ್ನು ಪಡೆದುಕೊಂಡಿದ್ದೇನೆ, 36 ಸಾವಿರ ಜನರು ಯೋಜನೆಯ ಪಡೆದಕೊಳ್ಳಬಹುದು. ಈ ಬಗ್ಗೆ ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ. ಎಲ್ಲರೂ ಯೋಜನೆಗಳು ಜನರಿಗೆ ತಲುಪುವಂತಾಗಬೇಕು ಎಂದು ಹೇಳಿದ್ರು.
ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆಗಳ ಬಗ್ಗೆ ಇಷ್ಟು ದಿನ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿದ್ದರು. ಇವತ್ತಿನಿಂದ ನಾವು ಅವರನ್ನು ಒಂದು ಕಡೆ ನಿಲ್ಲಿಸಿಲ್ಲ. ಸ್ವತಃ ಪ್ರಧಾನಿಯವರೇ ಬಿಜೆಪಿ ರಾಜ್ಯಾಧ್ಯಕ್ಷ ಸೇರಿದಂತೆ ಪಕ್ಷದ ನಾಯಕರನ್ನು ಬ್ಯಾರಿಕೇಡ್ ಹಿಂದೆ ನಿಲ್ಲಿಸಿದ್ದಾರೆ. ರಾಜ್ಯದ ಬಿಜೆಪಿಯವರಿಗೆ ಪ್ರಧಾನಿಯವರೇ ಉತ್ತರ ನೀಡಿದ್ದಾರೆ.