ಶಿವಮೊಗ್ಗ: ಇಡಿಗೆ ಸರಿಯಾದ ಮಾಹಿತಿ ನೀಡಿದರೆ ಡಿ.ಕೆ.ಶಿವಕುಮಾರ್ ಯಾಕೆ ಹೆದರಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಡಿಕೆಶಿ, ಇಡಿ ನಮಗೆ ಸುಮ್ಮನೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿದೆ ಎಂದಿದ್ದರು. ಈ ಹೇಳಿಕೆಗೆ ಶಿವಮೊಗ್ಗದಲ್ಲಿ ಸಚಿವರು ಪ್ರತಿಕ್ರಿಯಿಸಿದ್ದಾರೆ.
ಅವರು ಎಸಿಬಿಯನ್ನು ದುರುಪಯೋಗ ಪಡಿಸಿಕೊಂಡಿದ್ದರು. ಲೋಕಾಯುಕ್ತದ ಕುತ್ತಿಗೆ ಹಿಸುಕುವ ಕೆಲಸ ಮಾಡಿದ್ದರು. ಇಡಿಗೆ ಸೂಕ್ತ ಸಮಜಾಯಿಷಿ ನೀಡಲಿ. ಅದನ್ನು ಬಿಟ್ಟು ಯಾಕೆ ಭಯಪಡಬೇಕು? ಇವರು ಉತ್ತರ ಕೊಡದಿದ್ದರೆ ಕೇಸ್ ಮುಗಿಯುತ್ತಾ? ಎಂದು ಕೇಳಿದರು.
ಕುಮಾರಸ್ವಾಮಿ ಈಗ ರಾಜ್ಯಾದ್ಯಂತ ಸುತ್ತಾಡಿಕೊಂಡು ಬಂದಿದ್ದಾರೆ. ಇದರಿಂದ ಅವರ ಸ್ಥಾನ ಏನು ಎನ್ನುವುದು ಗೊತ್ತಾಗಿರಬೇಕು. ಆದ್ದರಿಂದ ಈ ರೀತಿ ಜಾತಿ, ಧರ್ಮಗಳ ನಡುವೆ ತಂದಿಡುವ ಕೆಲಸ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ತಮ್ಮ ಹೇಳಿಕೆಗೆ ಅವರು ಕ್ಷಮೆ ಯಾಚಿಸಬೇಕು. ಬಿಜೆಪಿ ಜಾತಿ ಮೀರಿದ ಪಕ್ಷ. ನಮ್ಮದು ಕನ್ನಡಿಗರ, ಭಾರತೀಯರ ಪಕ್ಷ ಎಂದರು.