ಕರ್ನಾಟಕ

karnataka

By

Published : Feb 4, 2021, 3:08 AM IST

Updated : Feb 4, 2021, 7:25 AM IST

ETV Bharat / state

'2023ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕಾದ್ರೆ ಯತ್ನಾಳ್,ವಿಶ್ವನಾಥ್ ವಿರುದ್ದ ಕ್ರಮ ತೆಗೆದುಕೊಳ್ಳಿ'

ವಿಜಯಪುರ ಶಾಸಕರು ಮತ್ತು ಎಂಎಸ್​ಸಿ ವಿಶ್ವನಾಥ್​ ಸಿಎಂ ಬಿಎಸ್​ವೈ ವಿರುದ್ಧ ಇಲ್ಲಸಲ್ಲದ ಅಪವಾದದ ಮಾತುಗಳನ್ನಾಡುತ್ತಿದ್ದಾರೆ. ಇದು ಬಿಜೆಪಿಗೆ ಕಪ್ಪುಚುಕ್ಕೆಯಾಗಿದೆ. ಜೆಡಿಎಸ್​ನಲ್ಲಿದ್ದ ಯತ್ನಾಳ್​ರನ್ನು ಮನವೊಲಿಸಿ ಬಿಜೆಪಿಗೆ ಕರೆತಂದದ್ದು ಯಡಿಯೂರಪ್ಪ ಎನ್ನವುದನ್ನು ಮರೆಯಬಾರದು. ಇವರಾಡುತ್ತಿರುವ ಮನಸ್ತಾಪದ ಮಾತುಗಳಿಂದ ರಾಜ್ಯದಲ್ಲಿ ಬಿಜೆಪಿ ಅನಾವಶ್ಯಕ ಟೀಕೆಗೆ ಗುರಿಯಾಗಿದೆ.

ಯತ್ನಾಳ್,ವಿಶ್ವನಾಥ್ ವಿರುದ್ದ ಕ್ರಮಕ್ಕೆ ಆಗ್ರಹ
ಯತ್ನಾಳ್,ವಿಶ್ವನಾಥ್ ವಿರುದ್ದ ಕ್ರಮಕ್ಕೆ ಆಗ್ರಹ

ಶಿವಮೊಗ್ಗ: ಬಿಜೆಪಿ‌ ರಾಜ್ಯದಲ್ಲಿ 2023ರಲ್ಲಿ ಅಧಿಕಾರಕ್ಕೆ ಬರಬೇಕಾದರೆ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಎಂಎಲ್​ಸಿ ಹೆಚ್.ವಿಶ್ವನಾಥ್ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಶಿವಮೊಗ್ಗ ನಗರ ನಾಗರೀಕ ವೇದಿಕೆ ಬಿಜೆಪಿ ಹೈ ಕಮಾಂಡ್​ಗೆ ಆಗ್ರಹಿಸಿದೆ.

ಈ ಕುರಿತು ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರವರು ಮಾಧ್ಯಮಗಳ ಮುಂದೆ ಕ್ರಮ ತೆಗೆದುಕೊಳ್ಳು ಭರವಸೆ ನೀಡಿದ್ದರು. ಅದು ಇನ್ನೂ ಈಡೇರಿಲ್ಲ. ಬಿಎಸ್​ವೈ ಕಳೆದ 50 ವರ್ಷಗಳಿಂದ ಕರ್ನಾಟಕದಲ್ಲಿ ನಿಷ್ಠೆಯಿಂದ ಮತ್ತು ಪರಿಶ್ರಮದಿಂದ ಬಜೆಪಿಗಾಗಿ ದುಡಿದಿದ್ದು, ಸರ್ಕಾರ ತರುವುದಕ್ಕಾಗಿ ಹಗಲು ರಾತ್ರಿ ದುಡಿದಿದ್ದಾರೆ. ಅವರು ಇಂದು ರೈತರ ಮಗನೆಂದು ಹೆಸರಾಗಿದ್ದಾರೆ.

ಶಿವಮೊಗ್ಗ ನಗರ ನಾಗರೀಕ ವೇದಿಕೆ ಪತ್ರ

ಆದರೆ ವಿಜಯಪುರ ಶಾಸಕರು ಮತ್ತು ಎಂಎಸ್​ಸಿ ವಿಶ್ವನಾಥ್​ ಸಿಎಂ ಬಿಎಸ್​ವೈ ವಿರುದ್ಧ ಇಲ್ಲಸಲ್ಲದ ಅಪವಾದದ ಮಾತುಗಳನ್ನಾಡುತ್ತಿದ್ದಾರೆ. ಇದು ಬಿಜೆಪಿಗೆ ಕಪ್ಪುಚುಕ್ಕೆಯಾಗಿದೆ. ಜೆಡಿಎಸ್​ನಲ್ಲಿದ್ದ ಯತ್ನಾಳ್​ರನ್ನು ಮನವೊಲಿಸಿ ಬಿಜೆಪಿಗೆ ಕರೆತಂದದ್ದು ಯಡಿಯೂರಪ್ಪ ಎನ್ನವುದನ್ನು ಮರೆಯಬಾರದು. ಇವರಾಡುತ್ತಿರುವ ಮನಸ್ತಾಪದ ಮಾತುಗಳಿಂದ ರಾಜ್ಯದಲ್ಲಿ ಬಿಜೆಪಿ ಅನಾವಶ್ಯಕ ಟೀಕೆಗೆ ಗುರಿಯಾಗಿದೆ.

ಹಾಗಾಗಿ ರಾಜ್ಯ ಉಸ್ತುವಾರಿಯಾಗಿರುವ ಅರುಣ್ ಸಿಂಗ್​ ಯತ್ನಾಳ್​ ಬಗ್ಗೆ ಶಿಸ್ತುಕ್ರಮ ತೆಗೆದುಕೊಳ್ಳಲು ತಿಳಿಸಿದ್ದರು. ಆದರೆ ಇನ್ನು ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ. 2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದ್ರೆ ಯತ್ನಾಳ್​​ ಮತ್ತು ವಿಶ್ವನಾಥ್​ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್​ಅವರಿಗೆ ಶಿವಮೊಗ್ಗ ನಗರ ನಾಗರೀಕ ವೇದಿಕೆ ಮನವಿ ಮಾಡಿಕೊಂಡಿದೆ.

ಇದನ್ನು ಓದಿ:ಯುಗಾದಿ ಒಳಗೆ ಸಿಎಂ ಬದಲಾಗ್ತಾರೆ, ಉತ್ತರ ಕರ್ನಾಟಕದವರಿಗೆ ಪಟ್ಟ : ಶಾಸಕ ಯತ್ನಾಳ

Last Updated : Feb 4, 2021, 7:25 AM IST

ABOUT THE AUTHOR

...view details