ಶಿವಮೊಗ್ಗ: ನನಗೆ ನೀಡಿರುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ, ಸಿಎಂ ಹಾಗೂ ಈಶ್ವರಪ್ಪನವರೇ ನನಗೆ ಸಚಿವ ಸ್ಥಾನ ನೀಡುವಂತಹ ಕೆಲಸ ಮಾಡುತ್ತೆನೆ ಎಂದು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷ ರಾಜು ಗೌಡ ಹೇಳಿದ್ದಾರೆ.
ಸಚಿವ ಸ್ಥಾನ ನೀಡುವಂತೆ ಕಾರ್ಯ ನಿರ್ವಹಿಸುತ್ತೇನೆ: ರಾಜು ಗೌಡ - water Supply-Drainage Board President
ಸಿಎಂ ಹಾಗೂ ಈಶ್ವರಪ್ಪನವರೇ ನನಗೆ ಸಚಿವ ಸ್ಥಾನ ನೀಡುವಂತಹ ಕೆಲಸ ಮಾಡುತ್ತೆನೆ ಎಂದು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷ ರಾಜು ಗೌಡ ತಿಳಿಸಿದ್ದಾರೆ.
ಕೆಲಸ ನೋಡಿ ಮಂತ್ರಿ ಸ್ಥಾನ ನೀಡುವಂತೆ ಕಾರ್ಯ ನಿರ್ವಹಿಸುತ್ತೇನೆ: ರಾಜು ಗೌಡ
ಕೆಲಸ ನೋಡಿ ಮಂತ್ರಿ ಸ್ಥಾನ ನೀಡುವಂತೆ ಕಾರ್ಯ ನಿರ್ವಹಿಸುತ್ತೇನೆ: ರಾಜು ಗೌಡ
ಜಿಲ್ಲೆಯಲ್ಲಿ ಮಾತನಾಡಿದ ಅವರು, ಕ್ಯಾಬಿನೆಟ್ ಸಚಿವನಾಗಿದ್ದೆ. ನನಗೆ ಡಿಮೋಷನ್ ಮಾಡಿ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ ಬಗ್ಗೆ ನಾನು ಈಶ್ವರಪ್ಪನವರ ಬಳಿ ಕೇಳಿದಾಗ ಅವರು ನನಗೆ ಗ್ರಾಮೀಣ ಭಾಗದ ಜನತೆಗೆ ನೀರು ಕುಡಿಸುವ ಅವಕಾಶ ಸಿಕ್ಕಿದೆ. ನಿನಗೆ ನಗರ ಭಾಗದ ಜನತೆಗೆ ನೀರು ಕುಡಿಸುವ ಪುಣ್ಯದ ಕೆಲಸ ಸಿಕ್ಕಿದೆ, ಮಾಡು ಅಂತ ಹೇಳಿದರು. ಅದೇ ರೀತಿ ನಾನು ಕೆಲಸ ಮಾಡುತ್ತಿದ್ದೇನೆ ಎಂದರು.
ನಮ್ಮ ಬಿಜೆಪಿ ಸರ್ಕಾರ ಒತ್ತಡದಲ್ಲಿದೆ. ಕೋವಿಡ್ ಬಿಕ್ಕಟ್ಟಿನ ನಡುವೆ ನಾವು ಸಚಿವ ಸ್ಥಾನ ಬೇಕು ಎಂದು ಕೇಳುವ ಸ್ಥಿತಿಯಲ್ಲಿ ಇಲ್ಲ ಎಂದರು.