ಶಿವಮೊಗ್ಗ:ಶರಣ ಹೂವಾಡಿಗ ಮಾದಯ್ಯನವರ ಜಯಂತಿಯನ್ನು ಜಿಲ್ಲೆಯಲ್ಲಿ ಆಚರಿಸಲಾಯಿತು.
ಶಿವಮೊಗ್ಗದಲ್ಲಿ ಹೂವಾಡಿಗ ಮಾದಯ್ಯನವರ ಜಯಂತಿ ಆಚರಣೆ - ಮಾದಯ್ಯನವರ ಜಯಂತಿ
ಶರಣ ಹೂವಾಡಿಗ ಮಾದಯ್ಯನವರ ಜಯಂತಿಯನ್ನು ಜಿಲ್ಲೆಯಲ್ಲಿ ಆಚರಣೆ ಮಾಡಲಾಗಿದ್ದು, ಇವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಮೆರವಣಿಗೆಗೆ ಕಲಾಮೇಳಗಳು ಮತ್ತಷ್ಟು ಮೆರಗು ತಂದವು.
![ಶಿವಮೊಗ್ಗದಲ್ಲಿ ಹೂವಾಡಿಗ ಮಾದಯ್ಯನವರ ಜಯಂತಿ ಆಚರಣೆ](https://etvbharatimages.akamaized.net/etvbharat/prod-images/768-512-4555168-thumbnail-3x2-mandyajpg.jpg)
ನಗರದ ಪ್ರಮುಖ ರಸ್ತೆಗಳ ಮೂಲಕ ವಿಶೇಷ ಹೂವಿನ ರಥದಲ್ಲಿ ಹೂವಾಡಿಗ ಮಾದಯ್ಯರ ಭಾವಚಿತ್ರದ ಮೆರವಣಿಗೆ ಮಾಡಿಲಾಯಿತು. ಕಲಾಮೇಳಗಳು ಮೆರವಣಿಗೆಗೆ ಮತ್ತಷ್ಟು ಮೆರಗು ತಂದವು. ಭಾವಚಿತ್ರವನ್ನು ನಗರದ ಕುವೆಂಪು ರಂಗಮಂದಿರದಲ್ಲಿ ಇರಿಸಿ ಜಯಂತಿ ಆಚರಿಸಲಾಯಿತು. ಈ ವೇಳೆ ಸಂಸದ ಬಿ.ವೈ.ರಾಘವೇಂದ್ರರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೂವಾಡಿ ಸಮಾಜವು ಸ್ವಾಭಿಮಾನಿ ಸಮಾಜವಾಗಿದೆ. ಎಲ್ಲಾ ಮಹಾತ್ಮರು ಜಾತಿ, ಧರ್ಮಗಳನ್ನು ಮೀರಿ ಬೆಳೆದವರು. ಶರಣರ ಮಾದಯ್ಯ ಶಿವನ ಎಲ್ಲಾ ಪರೀಕ್ಷೆಗಳನ್ನು ಗೆದ್ದಿದ್ದಾರೆ. ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ಸಮಾಜಕ್ಕೆ ಜಾತ್ಯಾತೀತ ತತ್ವ ಸಾರಿದ್ದಾರೆ ಎಂದರು.
ಬಿಜೆಪಿ ಸರ್ಕಾರ ಹಿಂದುಳಿದ ವರ್ಗವನ್ನು ಗುರುತಿಸುವ ಕೆಲಸ ಮಾಡಿದ್ದು, ಹೂವಾಡಿ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿರುವ ಶಿಕಾರಿಪುರದಲ್ಲಿ ಶೀಘ್ರವೇ ಹೂವಾಡಿಗ ಭವನ ನಿರ್ಮಾಣ ಮಾಡಲಾಗುವುದು ಎಂದರು.