ಕರ್ನಾಟಕ

karnataka

ETV Bharat / state

ಮದ್ವೆಯಾಗಿ ಎರಡೇ ವರ್ಷ, ಬಂಗಾರ-ದುಡ್ಡಿನ ದಾಹಕ್ಕೆ ಪತ್ನಿಯ ಚುಚ್ಚಿ ಕೊಂದ ಪತಿ - ಶಿವಮೊಗ್ಗದಲ್ಲಿ ಚಾಕುವಿನಿಂದ ಚುಚ್ಚಿ ಪತ್ನಿ ಹತ್ಯೆಗೈದ ಪತಿ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಶಿವಮೊಗ್ಗದ ದುಮ್ಮಳ್ಳಿಯಲ್ಲಿ ಎಂಬಿಎ ಪದವೀಧರನೊಬ್ಬ ಚಾಕುವಿನಿಂದ ಚುಚ್ಚಿ ಪತ್ನಿಯ ಕೊಲೆ ಮಾಡಿದ್ದು, ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ.

ಕೌಟುಂಬಿಕ ಕಲಹ
murder

By

Published : Sep 21, 2022, 10:05 AM IST

Updated : Sep 21, 2022, 10:34 AM IST

ಶಿವಮೊಗ್ಗ: ಕೌಟುಂಬಿಕ ಕಲಹದ ಕಾರಣಕ್ಕೆ ಚಾಕುವಿನಿಂದ ಹಲ್ಲೆಗೈದು ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ದುಮ್ಮಳ್ಳಿಯಲ್ಲಿ ನಡೆದಿದೆ. ಬುಳ್ಳಾಪುರದ ಅಮಿತಾ (26) ಮೃತಳು. ದುಮ್ಮಳ್ಳಿಯ ಕರುಣಾಕರ (27) ಹತ್ಯೆ ಮಾಡಿದ ಆರೋಪಿ.

ಹೇಗಾಯ್ತು ಘಟನೆ?: ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಗಂಡ, ಹೆಂಡತಿ ನಡುವೆ ಜಗಳ ನಡೆದಿದೆ. ಕೋಪಗೊಂಡ ಕರುಣಾಕರ, ಹೆಂಡತಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಅಮಿತಾಳ ಕುತ್ತಿಗೆ, ಭುಜ, ಕಿವಿ ಮತ್ತು ಪಕ್ಕೆಗೆ ಚಾಕುವಿನಿಂದ ಚುಚ್ಚಿದ್ದು, ನೋವಿನಿಂದ ಆಕೆ ಜೋರಾಗಿ ಕೂಗಿಕೊಂಡಿದ್ದಾಳೆ. ಬಳಿಕ ಸ್ಥಳಕ್ಕಾಮಿಸಿದ ಅಕ್ಕಪಕ್ಕದವರು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದು, ಅಷ್ಟರಲ್ಲೇ ಮೃತಪಟ್ಟಿದ್ದಾಳೆ.

ಇದನ್ನೂ ಓದಿ:ಬೆಂಗಳೂರಲ್ಲಿ ಮಲಗುವ ವಿಚಾರಕ್ಕೆ ಗಲಾಟೆ.. ವ್ಯಕ್ತಿ ಕೊಲೆಗೈದಿದ್ದ ಆರೋಪಿ ಬಂಧನ

ಹತ್ಯೆಗೆ ಕಾರಣವೇನು?: ಎಂಬಿಎ ಪದವೀಧರನಾಗಿರುವ ಕರುಣಾಕರನಿಗೆ ಎರಡೂವರೆ ವರ್ಷದ ಹಿಂದೆ ಬುಳ್ಳಾಪುರದ ಅಮಿತಾ ಜತೆ ಮದುವೆಯಾಗಿತ್ತು. ಮದುವೆ ಸಂದರ್ಭದಲ್ಲಿ ಯುವತಿಯ ಪೋಷಕರು ಬಂಗಾರ ಮತ್ತು ಹಣ ಕೊಟ್ಟಿದ್ದರೂ ಕೂಡ ಇನ್ನೂ ಹೆಚ್ಚಿಗೆ ಬೇಕು ಎಂದು ಪೀಡಿಸುತ್ತಿದ್ದನಂತೆ. ಇದೇ ವಿಷಯಕ್ಕೆ ಜಗಳ ತೆಗೆದು ದುಷ್ಕೃತ್ಯ ಎಸಗಿದ್ದಾನೆ ಎಂದು ಮೃತಳ ಕುಟುಂಬದವರು ಆರೋಪಿಸಿದ್ದಾರೆ.

ಆರೋಪಿ ಪತಿಯ ಬಂಧನ: ಈ ಕುರಿತು ಮೃತಳ ತಾಯಿ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಕಲಂ 498 A, 3048, 302 ಐಪಿಸಿ ಕಲಂ 3 ಮತ್ತು 4 ರ ವರದಕ್ಷಿಣೆ ಕಿರುಕುಳ ಕಾಯ್ದೆ 1961 ಅಡಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಮನೆಗೆ ನುಗ್ಗಿ ಮಲಗಿದ್ದ ವ್ಯಕ್ತಿಯ ಬರ್ಬರ ಹತ್ಯೆ.. ಬೆಚ್ಚಿಬಿದ್ದ ಕುಟುಂಬ

Last Updated : Sep 21, 2022, 10:34 AM IST

ABOUT THE AUTHOR

...view details