ಕರ್ನಾಟಕ

karnataka

ETV Bharat / state

ಕುಡಿದ ಮತ್ತಿನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಲೆಗೈದ ಪಾಪಿ ಪತಿ - ಪತಿಯಿಂದಳೇ ಪತ್ನಿಯ ಕೊಲೆ

ಪತಿ ಅಲ್ಲಾಭಕ್ಷ ಸಂಜೆ ಕುಡಿದ ಮತ್ತಿನಲ್ಲಿ ಬಂದು ಗಲಾಟೆ ಮಾಡಿ ಕತ್ತು ಹಿಸುಕಿದ ಪರಿಣಾಮ ರಜೀಯ ಬಾನು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆ ಸಂಬಂಧ ಆರೋಪಿ ಅಲ್ಲಾಭಕ್ಷನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Husband Murdered his Wife in Shivamogga
ಕುಡಿದ ಮತ್ತಿನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಲೆಗೈದ ಪಾಪಿ ಪತಿ

By

Published : Jan 5, 2021, 8:26 PM IST

ಶಿವಮೊಗ್ಗ:ಮದ್ಯದ ಮತ್ತಿನಲ್ಲಿ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಗರದ ಬೊಮ್ಮನಕಟ್ಟೆಯ ಜಿ ಬ್ಲಾಕ್​​​​ನಲ್ಲಿ ನಡೆದಿದೆ. ರಜೀಯ ಬಾನು (28) ಕೊಲೆಯಾದ ದುರ್ದೈವಿ ಎಂದು ತಿಳಿದು ಬಂದಿದೆ.

ಕುಡಿದ ಮತ್ತಿನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಲೆಗೈದ ಪಾಪಿ ಪತಿ

ಈಕೆಯ ಪತಿ ಅಲ್ಲಾಭಕ್ಷ ಸಂಜೆ ಕುಡಿದ ಮತ್ತಿನಲ್ಲಿ ಬಂದು ಗಲಾಟೆ ಮಾಡಿ ಕತ್ತು ಹಿಸುಕಿದ ಪರಿಣಾಮ ರಜೀಯ ಬಾನು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಬೊಮ್ಮನಕಟ್ಟೆಯ ಜಿ ಬ್ಲಾಕ್​​ನ ಅನ್ನಪೂರ್ಣೇಶ್ವರಿ ದೇವಸ್ಥಾನದ ಬಳಿ ಇರುವ ಮನೆಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಟಿ.ಶೇಖರ್, ಡಿವೈಎಸ್​​​​ಪಿ ಉಮೇಶ್ ಈಶ್ವರ್ ನಾಯಕ ಹಾಗೂ ವಿನೋಬನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ ಸಂಬಂಧ ಆರೋಪಿ ಅಲ್ಲಾಭಕ್ಷನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಜ್ಯೂಸ್​ ಕುಡಿದ ಮಕ್ಕಳಿಬ್ಬರು ಸಾವು: ಹೆತ್ತ ತಾಯಿಯೇ ವಿಷವುಣಿಸಿದ ಆರೋಪ!

ABOUT THE AUTHOR

...view details