ಕರ್ನಾಟಕ

karnataka

ETV Bharat / state

ಮಾವನೊಂದಿಗೆ ಸೊಸೆಗೆ ವಿವಾಹೇತರ ಸಂಬಂಧ ಶಂಕೆ: ಪತ್ನಿ ಹೆಣ ಉರುಳಿಸಿದ ಪತಿ! - ಅನೈತಿಕ ಸಂಬಂಧ ಆರೋಪ

ಶಿವಮೊಗ್ಗೆ ಜಿಲ್ಲೆಯಲ್ಲಿ ವಿವಾಹೇತರ ಸಂಬಂಧ ಶಂಕೆ ಹಿನ್ನೆಲೆ ಗೃಹಿಣಿವೋರ್ವಳ ಬರ್ಬರ ಕೊಲೆಯಾಗಿದೆ. ಪತ್ನಿಯ ವಿವಾಹೇತರ ಸಂಬಂಧವನ್ನು ಕಣ್ಣಾರೆ ಕಂಡಿದ್ದ ಎನ್ನಲಾದ ಪತಿಯೇ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

husband murder his wife
ಅನೈತಿಕ ಸಂಬಂಧ ಆರೋಪ: ಗಂಡನಿಂದಲೇ ಪತ್ನಿಯ ಕೊಲೆ

By

Published : Nov 2, 2020, 6:50 AM IST

ಶಿವಮೊಗ್ಗ:ಮಾವನೊಂದಿಗೆ ಮಹಿಳೆಯವೋರ್ವಳು ವಿವಾಹೇತರ ಸಂಬಂಧ ಹೊಂದಿರುವ ಶಂಕೆ ಹಿನ್ನೆಲೆ ಬರ್ಬರವಾಗಿ ಕೊಲೆಗೀಡಾಗಿರುವ ಘಟನೆ ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಪತ್ನಿಯ ಈ ಸಂಬಂಧವನ್ನು ಕಣ್ಣಾರೆ ಕಂಡಿದ್ದ ಎನ್ನಲಾದ ಪತಿ ಆಕೆಯನ್ನು ಚಾಕುವಿಂದ ಇರಿದು ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ಮಲ್ಲಿಕಾರ್ಜುನ ನಗರದಲ್ಲಿ ನಡೆದಿದೆ.

ಫಾತಿಮಾ ಕೊಲೆಗೀಡಾಗಿರುವ ಮಹಿಳೆ. ಪತಿ ಸಯ್ಯದ್ ಫರ್ವೇಜ್ ತನ್ನ ಹೆಂಡತಿ ಬೇರೆ ಯಾರದ್ದೋ ಜೊತೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ತಿಳಿದುಕೊಂಡಿದ್ದ. ಈ ಹಿನ್ನೆಲೆಯಲ್ಲಿ ಹಿಂದೆ ಸಾಕಷ್ಟು ಬಾರಿ ವಾರ್ನಿಂಗ್ ಸಹ ನೀಡಿದ್ದ ಎನ್ನಲಾಗ್ತಿದೆ. ಆದರೂ ಕೂಡ ಫಾತಿಮಾ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ್ದಳು. ಮನೆಗೆ ಬಂದಾಗ ತನ್ನ ತಂದೆಯ ಜೊತೆಯೇ ಫಾತಿಮಾ ಇರುವುದನ್ನು ಕಂಡ ಫರ್ವೇಜ್ ಕೋಪದಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಈ ಕುರಿತು ಮಾಹಿತಿ ತಿಳಿದ ತುಂಗಾನಗರ ಪೊಲೀಸರು ಆರೋಪಿಯನ್ನು‌ ಎರಡು ಗಂಟೆಯೊಳಗೆ ಬಂಧಿಸಿದ್ದಾರೆ.

ABOUT THE AUTHOR

...view details