ಶಿವಮೊಗ್ಗ:ಭದ್ರಾವತಿ ವಲಯ ಅರಣ್ಯಾಧಿಕಾರಿಗಳ ತಂಡ ಹಾಗೂ ಚನ್ನಗಿರಿ ಪೊಲೀಸ್ ಅರಣ್ಯ ಸಂಚಾರಿ ದಳದವರು ಜಂಟಿ ಕಾರ್ಯಾಚರಣೆ ನಡೆಸಿ ಚಿರತೆ ಚರ್ಮ, ಜಿಂಕೆ ಹಾಗೂ ಕಾಡು ಕೋಣದ ಕೊಂಬುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಭದ್ರಾವತಿ ತಾಲೂಕು ದೊಡ್ಡೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಳೆಕಟ್ಟೆ ಗ್ರಾಮದ ಮನೆಯಲ್ಲಿ ಚರ್ಮ ಹಾಗೂ ಕೊಂಬುಗಳು ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ.
ಈ ವೇಳೆ ಮನೆಯ ಮಾಲೀಕ ಪ್ರೇಮನಾಥ ರೆಡ್ಡಿ ಹಾಗೂ ಆತನ ಮಗ ಮಂಜುನಾಥ್ನನ್ನು ಬಂಧಿಸಲಾಗಿದೆ. ಚರ್ಮ ಮಾರಾಟ ಮಾಡುವ ಉದ್ದೇಶದಿಂದ ಚಿರತೆಯನ್ನು ಬೇಟೆಯಾಡಲಾಗಿದೆ.
ಈ ಕುರಿತು ಭದ್ರಾವತಿ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ದೂರು ದಾಖಲಾಗಿದೆ. ದಾಳಿಯಲ್ಲಿ ಚನ್ನಗಿರಿ ಸಂಚಾರಿ ಪೊಲೀಸ್ ದಳದ ಶ್ರೀಮತಿ ಭಾರತಿ, ಭದ್ರಾವತಿ ಆರ್ ಎಫ್ ಓ ಮಂಜುನಾಥ್, ಡಿಆರ್ ಎಫ್ ಓ ಅಣ್ಣನಾಯ್ಕ ಹಾಗೂ ಸಿಬ್ಬಂದಿಗಳು ಹಾಜರಿದ್ದರು.