ಶಿವಮೊಗ್ಗ: ತಮ್ಮೂರಿನ ದಾರಿ ಮರೆತು ರಸ್ತೆಯಲ್ಲಿ ತಿರುಗಾಡುತ್ತಿದ್ದ ವೃದ್ದನಿಗೆ ಮಾಜಿ ಶಾಸಕರೊಬ್ಬರು ಧನ ಸಹಾಯ ಮಾಡಿ ಮನೆಗೆ ಹೋಗಲು ವಾಹನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ದಾರಿ ತಪ್ಪಿದ ವೃದ್ಧರೊಬ್ಬರಿಗೆ ಹಣ ನೀಡಿ, ಮನೆಗೆ ಕಳುಹಿಸಿದ ಮಾಜಿ ಶಾಸಕ: ಸಾರ್ವಜನಿಕರಿಂದ ಪ್ರಶಂಸೆ - Humanitarian work by former MLA Belur Gopalakrishna
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೊಸನಗರ ತಾಲೂಕು ನಿಟ್ಟೂರು ಕಡೆ ಹೋಗುವಾಗ ವೃದ್ಧರೊಬ್ಬರು ರಸ್ತೆಯಲ್ಲಿ ಓಡಾಡುತ್ತಿರುವುದನ್ನು ಗಮನಿಸಿ, ಕಾರಿನಿಂದ ಇಳಿದು ವಿಚಾರಿಸಿದ್ದಾರೆ. ಈ ವೇಳೆ ವೃದ್ದ ದಾರಿ ತಪ್ಪಿರುವ ವಿಷಯ ತಿಳಿಯುತ್ತದೆ. ಹೀಗಾಗಿ ವೃದ್ದನ ವ್ಯಕ್ತಿಗೆ ಹಣ ನೀಡಿ, ಊರಿಗೆ ಹೋಗಲು ವಾಹನ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.
![ದಾರಿ ತಪ್ಪಿದ ವೃದ್ಧರೊಬ್ಬರಿಗೆ ಹಣ ನೀಡಿ, ಮನೆಗೆ ಕಳುಹಿಸಿದ ಮಾಜಿ ಶಾಸಕ: ಸಾರ್ವಜನಿಕರಿಂದ ಪ್ರಶಂಸೆ Humanitarian work by a former MLA](https://etvbharatimages.akamaized.net/etvbharat/prod-images/768-512-6037941-thumbnail-3x2-hrs.jpg)
ವೃದ್ದನಿಗೆ ವಾಹನ ವ್ಯವಸ್ಥೆ ಮಾಡಿ ಮನೆಗೆ ಕಳುಹಿಸಿಕೊಟ್ಟ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೊಸನಗರ ತಾಲೂಕು ನಿಟ್ಟೂರು ಕಡೆ ಹೋಗುವಾಗ ವೃದ್ದರೊಬ್ಬರು ರಸ್ತೆಯಲ್ಲಿ ಓಡಾಡುತ್ತಿರುವುದನ್ನು ಗಮನಿಸಿ, ಕಾರಿನಿಂದ ಇಳಿದು ವಿಚಾರಿಸಿದ್ದಾರೆ. ಈ ವೇಳೆ ವೃದ್ಧ ದಾರಿ ತಪ್ಪಿರುವ ವಿಷಯ ತಿಳಿಯುತ್ತದೆ.
ಹೀಗಾಗಿ ವೃದ್ಧನಿಗೆ ಹಣ ನೀಡಿ, ಊರಿಗೆ ಹೋಗಲು ವಾಹನ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ. ಮಾಜಿ ಶಾಸಕರ ಈ ಮಾನವೀಯ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.