ಕರ್ನಾಟಕ

karnataka

ETV Bharat / state

ಕಾಡು ಪ್ರಾಣಿಗಳ ದಾಳಿಗೊಳಗಾದ ಕೃಷಿ ಭೂಮಿಗೆ ಸಕಾಲದಲ್ಲಿ ಪರಿಹಾರ - Human-wildlife conflict (HWC)

ಮಲೆನಾಡಿನ ರೈತರು ಬಗರ್ ​​ಹುಕುಂ ಹೆಸರಿನಲ್ಲಿ ಕಾಡುಗಳನ್ನು ಕಡಿದು ಕೃಷಿ ಭೂಮಿ ಹಾಗೂ ವಸತಿ ಪ್ರದೇಶಗಳನ್ನಾಗಿ ಪರಿವರ್ತಿಸಿಕೊಂಡಿದ್ದು, ಪ್ರಾಣಿ ಮತ್ತು ಮಾನವ ಸಂಘರ್ಷಕ್ಕೆ ಕಾರಣವಾಗಿದೆ.

crop destroyed
ಬೆಳೆ ಹಾನಿ

By

Published : Dec 28, 2020, 10:23 PM IST

ಶಿವಮೊಗ್ಗ: ಅರಣ್ಯದಂಚಿನ ಪ್ರದೇಶಗಳಲ್ಲಿ ಮಾನವ ಹಾಗೂ ಪ್ರಾಣಿಗಳ ಸಂಘರ್ಷ ಅನಾದಿ ಕಾಲದಿಂದಲೂ ನಡೆಯುತ್ತಿದೆ. ಹಿಂದೆಲ್ಲಾ ಬೇಟೆಗಾಗಿ ನಡೆಯುತ್ತಿತ್ತು. ಈಗ ಕೃಷಿ ಭೂಮಿಗಾಗಿ ನಡೆಯುತ್ತಿದೆ.

ಮಾನವ ತನ್ನ ದುರಾಸೆಯಿಂದ ಅರಣ್ಯವನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿಕೊಂಡಿದ್ದು, ಈ ಪ್ರದೇಶಕ್ಕೆ ಬರುವ ಕಾಡು ಪ್ರಾಣಿಗಳು ಹಾಗೂ ಮಾನವನ‌ ನಡುವೆ ಸಂಘರ್ಷ ನಡೆಯುತ್ತದೆ. ಬೆಳೆ ರಕ್ಷಣೆಗಾಗಿ ಮಾನವ, ಪ್ರಾಣಿಗಳ ಜೀವ ತೆಗೆಯುತ್ತಾನೆ.

ಇದನ್ನೂ ಓದಿ...ಕಬ್ಬಿಣದ ದರ ಏರಿಕೆ ಖಂಡಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ

ಮಲೆನಾಡು ಪ್ರದೇಶವಾದರೂ ಇಲ್ಲಿ ಪ್ರಾಣಿ ಮತ್ತು ಮಾನವ ಸಂಘರ್ಷ ವರದಿಯಾಗಿರುವುದೇ ಕಡಿಮೆ. ಆದರೆ ಬೆಳಕಿಗೆ ಬರದ ಪ್ರಕರಣಗಳು ಎಷ್ಟೋ ಇವೆ. ಭದ್ರಾವತಿ ತಾಲೂಕಿನ ಕೆಂಚಮ್ಮನ ಗುಡ್ಡ, ಉಂಬ್ಳೆಬೈಲಿನ ಕೆಳಭಾಗ, ತೀರ್ಥಹಳ್ಳಿಯ ಆಗುಂಬೆ ಹೋಬಳಿ ಹಾಗೂ ಸಾಗರ ಭಾಗದಲ್ಲಿ ಕಾಡು ಪ್ರಾಣಿಗಳ‌ ಕಾಟ ಹೆಚ್ಚಿದೆ. ಬಗರ್ ​​ಹುಕುಂ ಹೆಸರಿನಲ್ಲಿ ಜನರು ಕಾಡು ನಾಶಪಡಿಸಿ ಕೃಷಿ ಭೂಮಿ ಹಾಗೂ ವಸತಿ ಪ್ರದೇಶವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್

ಸಕಾಲದಲ್ಲಿ ಪರಿಹಾರ: ಜಿಲ್ಲೆಯಲ್ಲಿ ಭದ್ರಾವತಿಯ ಉಂಬ್ಳೆಬೈಲು ಬಳಿ ಕಾಡಾನೆಯೊಂದು ಭತ್ತ, ಅಡಿಕೆ ಬೆಳೆಯನ್ನು‌ ನಾಶ ಮಾಡಿದೆ. ತೀರ್ಥಹಳ್ಳಿ ಆಗುಂಬೆ ಭಾಗದಲ್ಲಿ ಕಾಡೆಮ್ಮೆ ದಾಳಿ ನಡೆಸಿತ್ತು. ಸಾಗರ ಭಾಗದಲ್ಲೂ‌ ಕಾಡೆಮ್ಮ ಕಾಟ ಹೆಚ್ಚಿದೆ. ಕಾಡು ಪ್ರಾಣಿಗಳು ಬೆಳೆ ಹಾನಿ ಮಾಡಿದರೆ ಅರಣ್ಯ ಇಲಾಖೆ ಪರಿಶೀಲನೆ ನಡೆಸಿ, ಅವರಿಗೆ ಸಕಾಲದಲ್ಲಿ ಪರಿಹಾರ ಒದಗಿಸುತ್ತಿದೆ ಎಂದು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ತಿಳಿಸಿದ್ದಾರೆ.

ABOUT THE AUTHOR

...view details