ಶಿವಮೊಗ್ಗ:ಸಣ್ಣ ಗಲಾಟೆಗಳ ಬಗ್ಗೆ ಸದನದಲ್ಲಿ ಹೋರಾಟ ಮಾಡುವ ಶಾಸಕ ಸಂಗಮೇಶ್ವರ ಅವರು, ವಿಐಎಸ್ಎಲ್, ಎಂಪಿಎಂ ಕಾರ್ಖಾನೆಗಳ ಬಗ್ಗೆ ಯಾಕೆ ಹೋರಾಟ ಮಾಡುತ್ತಿಲ್ಲ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭದ್ರಾವತಿಯಲ್ಲಿ ನಡೆದ ಸಣ್ಣ ಗಲಾಟೆಯನ್ನು ಅಷ್ಟು ದೊಡ್ಡದು ಮಾಡಿ ಸದನದಲ್ಲಿ ವಾರಗಟ್ಟಲೇ ಚರ್ಚಿಸಿ, ಶಿವಮೊಗ್ಗದಲ್ಲಿ ಬಹೃತ್ ಸಮಾವೇಶ ಮಾಡುವ ಭದ್ರಾವತಿ ಶಾಸಕ ಸಂಗಮೇಶ್ವರ ಅವರು ಮುಚ್ಚಿಹೋಗುತ್ತಿರುವ ವಿಐಎಸ್ಎಲ್, ಎಂಪಿಎಂ ಕಾರ್ಖಾನೆಗಳ ಬಗ್ಗೆ ಯಾಕೆ ಸದನದಲ್ಲಿ ಚರ್ಚಿಸುತ್ತಿಲ್ಲ, ಹೋರಾಟ ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಶಾಸಕ ಸಂಗಮೇಶ್ವರ ಅವರು ಸದನದಲ್ಲಿ ಬಟ್ಟೆ ಬಿಚ್ಚುವ ಮೂಲಕ ಭದ್ರಾವತಿಯ ಮಾನ ಹರಾಜು ಮಾಡಿದ್ದಾರೆ. ಭದ್ರಾವತಿಯ ಅಭಿವೃದ್ಧಿಗೆ ಹೋರಾಟ ಮಾಡದೇ ಶಾಸಕರು ಸ್ವ ಕುಟುಂಬದ ಲಾಭಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದರು.
ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಯಡಿಯೂರಪ್ಪ ಸಹ ಎಂಪಿಎಂ ಉಳಿಸುವ ನಿಟ್ಟಿನಲ್ಲಿ ಯಾರೊಬ್ಬರೂ ಚರ್ಚಿಸುತ್ತಿಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಗಮೇಶ್ವರ ಅವರು ಭದ್ರಾವತಿಯ ಎಂಪಿಎಂ ಹಾಗೂ ವಿಐಎಸ್ಎಲ್ ಕಾರ್ಖಾನೆಗಳ ಅಭಿವೃದ್ಧಿಗೆ ಹೋರಾಟ ಮಾಡದೇ ಹೊದರೆ ರಾಜಕೀಯ ಬಿಟ್ಟು ಮನೆಯಲ್ಲಿ ಇರಲಿ ಎಂದು ಆಗ್ರಹಿಸಿದರು.