ಕರ್ನಾಟಕ

karnataka

ETV Bharat / state

ಚಂದ್ರಗುತ್ತಿ ರೇಣುಕಾಂಬ ದಸರಾ ಉತ್ಸವವನ್ನು ಶಾಸಕ ಕುಮಾರ ಬಂಗಾರಪ್ಪ ಸಂಪ್ರದಾಯ ಬಿಟ್ಟು ನಡೆಸಿದ್ದಾರೆ: ಹುಲ್ತಿಕೊಪ್ಪ‌ ಶ್ರೀಧರ್ - ರೇಣುಕಾಂಬ ದೇವಿಯ ಪಲ್ಲಕ್ಕಿ ಉತ್ಸವ

ಸೊರಬದ ಶಾಸಕರು ಈ ಬಾರಿಯ ದಸರಾ ಕಾರ್ಯಕ್ರಮವನ್ನು‌ ಮುಜರಾಯಿ ಇಲಾಖೆಯ ನಿಯಮವನ್ನು ಉಲ್ಲಂಘಿಸಿ ನಡೆಸಿದ್ದಾರೆ. ಇದು ಇಲ್ಲಿನ ಭಕ್ತಾಧಿಗಳಿಗೆ ನೋವುಂಟು ಮಾಡಿದೆ ಎಂದು ಚಂದ್ರಗುತ್ತಿ ರೇಣುಕಾಂಬ ದಸರಾ ಆಚರಣಾ ಸಮಿತಿಯ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ‌ ಆರೋಪಿಸಿದ್ದಾರೆ.

ಹುಲ್ತಿಕೊಪ್ಪ‌ ಶ್ರೀಧರ್
ಹುಲ್ತಿಕೊಪ್ಪ‌ ಶ್ರೀಧರ್

By

Published : Oct 17, 2022, 4:07 PM IST

ಶಿವಮೊಗ್ಗ:ರಾಜ್ಯದ ಪ್ರಸಿದ್ಧ ಯಾತ್ರಸ್ಥಳವಾದ ಸೊರಬದ ಚಂದ್ರಗುತ್ತಿಯ ರೇಣುಕಾಂಬ‌ ದೇವಿಯ ದಸರಾ ಉತ್ಸವವನ್ನು ಶಾಸಕ ಕುಮಾರ ಬಂಗಾರಪ್ಪನವರು ಸಂಪ್ರದಾಯವನ್ನು ಬಿಟ್ಟು ತಮ್ಮ ರಾಜಕೀಯ ಸಮಾವೇಶದ ರೀತಿ‌ ನಡೆಸಿದ್ದಾರೆ ಎಂದು ಚಂದ್ರಗುತ್ತಿ ರೇಣುಕಾಂಬ ದಸರಾ ಆಚರಣಾ ಸಮಿತಿಯ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ‌ ಆರೋಪಿಸಿದ್ದಾರೆ.

ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸೊರಬದ ಶಾಸಕರು ಈ ಭಾರಿಯ ದಸರಾ ಕಾರ್ಯಕ್ರಮವನ್ನು‌ ಮುಜರಾಯಿ ಇಲಾಖೆಯ ನಿಯಮವನ್ನು ಉಲ್ಲಂಘಿಸಿ ನಡೆಸಿದ್ದಾರೆ. ಇದು ಇಲ್ಲಿನ ಭಕ್ತಾಧಿಗಳಿಗೆ ನೋವುಂಟು ಮಾಡಿದೆ ಎಂದರು.

ಚಂದ್ರಗುತ್ತಿ ರೇಣುಕಾಂಬ ದೇವಾಲಯ ರಾಜ್ಯದ ಎ ಗ್ರೇಡ್ ನ ದೇವಾಲಯವಾಗಿದೆ. ಇಲ್ಲಿ ಪ್ರತಿ ಬಾರಿ ಮುಜರಾಯಿ ಇಲಾಖೆಯವರು ಅಣತಿಯಂತೆ, ಅವರ ಆದೇಶದ ಮೇರೆಗೆ ಸಂಪ್ರದಾಯ ಬದ್ಧವಾಗಿ ಆಚರಣೆ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ಈ ಬಾರಿ ಸ್ಥಳೀಯವಾಗಿ ಯಾರನ್ನು ತಮ್ಮ ವಿಶ್ಬಾಸಕ್ಕೆ ತೆಗೆದುಕೊಂಡು ಹೋಗದೆ, ತಾವೇ ಹಿಟ್ಲರ್​ನಂತೆ ಸರ್ವಾಧಿಕಾರಿ ಧೋರಣೆಯನ್ನು ನಡೆಸಿದ್ದಾರೆ. ಇದು ಭಕ್ತಾಧಿಗಳ‌ ಮನಸ್ಸಿಗೆ ನೋವುಂಟು ಮಾಡಿದೆ. ರೇಣುಕಾದೇವಿಗೆ ಉತ್ತರ ಕರ್ನಾಟಕದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇವರು ತಮ್ಮ ಹರಕೆಯನ್ನು ತೀರಿಸುತ್ತಾರೆ.

ದೇವಿ ಪಲ್ಲಕ್ಕಿ ಉತ್ಸವನ್ನು ಟ್ರಾಕ್ಟರ್ ನಲ್ಲಿ ನಡೆಸಿದ್ದು ಸರಿಯಲ್ಲ: ರೇಣುಕಾಂಬ ದೇವಿಯ ಪಲ್ಲಕ್ಕಿ ಉತ್ಸವವನ್ನು ಪ್ರತಿವರ್ಷ ನಡೆಸಲಾಗುತ್ತದೆ. ಈ ವೇಳೆ ಭಕ್ತರು ರಸ್ತೆಯಲ್ಲಿ ಮಲಗುತ್ತಾರೆ. ಮಲಗಿದವರ ಮೇಲೆ ಪಲ್ಲಕ್ಕಿ ಹಾದು ಹೋಗುತ್ತದೆ. ಇದರಿಂದ ಹರಕೆ ತೀರುತ್ತದೆ ಎಂಬ ನಂಬಿಕೆ ಭಕ್ತರದ್ದಾಗಿದೆ. ಆದರೆ ಶಾಸಕ ಕುಮಾರ ಬಂಗಾರಪ್ಪನವರು ಈ ಬಾರಿ ದೇವಿಯ ಪಲ್ಲಕ್ಕಿಯನ್ನು ಟ್ರಾಕ್ಟರ್ ನಲ್ಲಿ ಮೆರವಣಿಗೆ ನಡೆಸಿದ್ದಾರೆ.

ಚಂದ್ರಗುತ್ತಿ ರೇಣುಕಾಂಬ ದಸರಾ ಉತ್ಸವವನ್ನು ಶಾಸಕ ಕುಮಾರ ಬಂಗಾರಪ್ಪ ಸಂಪ್ರದಾಯ ಬಿಟ್ಟು ನಡೆಸಿದ್ದಾರೆ: ಹುಲ್ತಿಕೊಪ್ಪ‌ ಶ್ರೀಧರ್

ಗೊಬ್ಬರ ಸಾಗಣೆ ಮಾಡುವ ಟ್ರಾಕ್ಟರ್​ನಲ್ಲಿ ಪಲ್ಲಕ್ಕಿ ನಡೆಸಿದ್ದು ಎಷ್ಟು ಸರಿ. ಮುಜರಾಯಿ ಇಲಾಖೆಯಲ್ಲಿ ಟ್ರಾಕ್ಟರ್ ಮೇಲೆ ಪಲ್ಲಕ್ಕಿ ಉತ್ಸವ ನಡೆಸುವ ಬಗ್ಗೆ ಆದೇಶವಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳಿಗೆ, ಸಾಗರ ಉಪವಿಭಾಗಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಶ್ರೀಧರ್ ಹುಲ್ತಿಕೊಪ್ಪ ತಿಳಿಸಿದ್ದಾರೆ.‌ ನಮ್ಮ ಗ್ರಾಮ ಪಂಚಾಯತಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ‌. ನಮ್ಮಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ನೀಡದೆ ಇದ್ರು ಸಹ ಅಕ್ರಮವಾಗಿ ದಸರಾ ಕಾರ್ಯಕ್ರಮವನ್ನು‌ ನಡೆಸಿದ್ದಾರೆ ಎಂಬ ಆರೋಪವನ್ನು ಚಂದ್ರಗುತ್ತಿ ಗ್ರಾಮ ಪಂಚಾಯತಿ ಅಧ್ಯಕ್ಷ ರತ್ನಾಕರ್ ತಿಳಿಸಿದ್ದಾರೆ.

ಓದಿ:ನಿರುತ್ಸಾಹದ ಮಧ್ಯೆ ಚಿಗುರೊಡೆದ ಆಸೆ: ಮತ್ತೆ ಶುರುವಾದ ಸಚಿವ ಸ್ಥಾನದ ಲಾಬಿ

ABOUT THE AUTHOR

...view details