ಶಿವಮೊಗ್ಗ:ನಮ್ಮ ಊರಿಗೆ ಮದ್ಯದಂಗಡಿ ಬೇಡ ಎಂದು ಹೊಳೆಬೆನವಳ್ಳಿ ದೊಡ್ಡತಾಂಡ ಹಾಗೂ ಸಣ್ಣ ತಾಂಡದ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಊರಿಗೆ ಮದ್ಯದಂಗಡಿ ಬೇಡ.. ಹೊಳೆಬೆನವಳ್ಳಿ ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ನಮ್ಮ ಊರಿಗೆ ಮದ್ಯದಂಗಡಿ ಬೇಡ ಎಂದು ಹೊಳೆಬೆನವಳ್ಳಿ ದೊಡ್ಡತಾಂಡ ಹಾಗೂ ಸಣ್ಣ ತಾಂಡದ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಮ್ಮ ಗ್ರಾಮಗಳಲ್ಲಿ ಮದ್ಯದಂಗಡಿ ತೆರೆಯಲು ಈಗಾಗಲೇ ಅರ್ಜಿಗಳು ಬಂದಿವೆ. ಯಾವುದೇ ಕಾರಣಕ್ಕೂ ಅದಕ್ಕೆ ಅವಕಾಶ ಕೊಡಬಾರದು. ಈಗಾಗಲೇ ಗ್ರಾಮಕ್ಕೆ ಹೊಂದಿಕೊಂಡಂತೆ ಒಂದು ಮದ್ಯ ದಂಗಡಿ ಇದೆ. ಮತ್ತೊಂದು ಮದ್ಯದಂಗಡಿ ಬಂದರೆ ಗ್ರಾಮದ ಸ್ವಾಸ್ಥ್ಯವೇ ಹಾಳಾಗುತ್ತದೆ. ಊರಿನಲ್ಲಿ ಬಡವರೇ ಹೆಚ್ಚಾಗಿದ್ದು, ಮದ್ಯವ್ಯಸನಿಗಳಾಗಿ ಜೀವನ ಸಾಗಿಸುವುದೇ ಕಷ್ಟವಾಗುತ್ತದೆ.
ಈ ಹಿಂದೆ ಜಿಲ್ಲಾಧಿಕಾರಿಗಳು ಇಂತಹ ಅರ್ಜಿ ಬಂದಾಗ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅವಕಾಶ ಕೊಡುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ಈಗ ಮತ್ತೆ ಕೆಲವರು ಮದ್ಯದಂಗಡಿ ತೆರೆಯಲು ಅಬಕಾರಿ ಇಲಾಖೆಗೆ ಅರ್ಜಿ ಹಾಕಿದ್ದಾರೆ. ಕೂಡಲೇ ಇದನ್ನು ಸ್ಥಗಿತಗೊಳಿಸಿ ಗ್ರಾಮಸ್ಥರ ಹಿತ ಕಾಪಾಡಬೇಕೆಂದು ಒತ್ತಾಯಿಸಿದ್ದಾರೆ.