ಬೆಂಗಳೂರು/ಶಿವಮೊಗ್ಗ:ಸಾರ್ವಜನಿಕರು ತಮ್ಮ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಿಗೆ ಹೋದ್ರೆ ಅಲ್ಲಿನ ಸಿಬ್ಬಂದಿಗೆ ಹೆಚ್ಚು ಒತ್ತಡ ಉಂಟಾಗುವುದರಲ್ಲಿ ಅನುಮಾನವೇ ಇಲ್ಲ. ಅವರ ಒತ್ತಡ ಕಡಿಮೆ ಮಾಡಿ ನಗರ ಆರೋಗ್ಯ ಕೇಂದ್ರಗಳು ಸ್ಥಳೀಯವಾಗಿ ಉತ್ತಮ ಆರೋಗ್ಯ ಸೇವೆ ಒದಗಿಸುತ್ತಿವೆ.
ನಗರ ಆರೋಗ್ಯ ಕೇಂದ್ರಗಳ ಸೇವೆಯಿಂದ ಸಾರ್ವಜನಿಕರಿಗೆ ತೃಪ್ತಿ!? ಬೆಂಗಳೂರಿನ ನಗರ ಆರೋಗ್ಯ ಕೇಂದ್ರದಲ್ಲಿ ಜನರಿಗೆ ಸೂಕ್ತ ಆರೋಗ್ಯ ಸೇವೆ ಒದಗಿಸುವ ಜತೆಗೆ ಸೋಂಕಿನ ಕುರಿತು ಜಾಗೃತಿ ಮೂಡಿಸುವ ಕೆಲಸವೂ ಆಗುತ್ತಿದೆ. ಭಾರತ ಸರ್ಕಾರದ ಪ್ರಮುಖ ಟೆಲಿಮೆಡಿಸಿನ್ ಸಮಾಲೋಚನೆ ಇ- ಸಂಜೀವಿನಿ ಬಳಕೆಯಲ್ಲಿದ್ದು, ಮಾರ್ಚ್ ಅಂತ್ಯದವರೆಗೆ 7,07,196 ಮಂದಿ ಈ ಟೆಲಿಮೆಡಿಸಿನ್ ಸೇವೆ ಬಳಸಿದ್ದಾರೆ.
14 ನಗರ ಆರೋಗ್ಯ ಕೇಂದ್ರಗಳು ಶಿವಮೊಗ್ಗ ಜಿಲ್ಲೆಯ ಜನತೆಗೆ ಆರೋಗ್ಯ ಸೇವೆ ಒದಗಿಸುತ್ತಿವೆ. ಕೋವಿಡ್ ಹರಡುವಿಕೆ ಭೀತಿ ಹಿನ್ನೆಲೆ ಇ- ಸಂಜೀವಿನಿ ಡಾಟ್ ಇನ್ ಮತ್ತು ಇ- ಸಂಜೀವಿನಿ ಒಪಿಡಿ ಮೂಲಕ ಜನರು ಟೆಲಿಮೆಡಿಸನ್ ಸೇವೆ ಪಡೆಯುತ್ತಿದ್ದಾರೆ. ಈ ಟೆಲಿಮೆಡಿಸಿನ್ ಸೇವೆಯಲ್ಲಿ ರಾಜ್ಯವು ದೇಶಕ್ಕೆ ಪ್ರಥಮ ಸ್ಥಾನದಲ್ಲಿರುವುದು ಹೆಮ್ಮೆಯ ವಿಚಾರ. ಶಿವಮೊಗ್ಗ ಜನತೆ ಕೂಡ ನಗರ ಆರೋಗ್ಯ ಕೇಂದ್ರಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಸ್ಥಳೀಯವಾಗಿ ನಗರ ಆರೋಗ್ಯ ಕೇಂದ್ರಗಳು ಉತ್ತಮ ಆರೋಗ್ಯ ಸೇವೆ ನೀಡುವ ಮೂಲಕ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳ ಹೊರೆ ಕಡಿಮೆ ಮಾಡಿವೆ ಎಂದ್ರೆ ತಪ್ಪಾಗಲಾರದು.