ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಅನಾಹುತಗಳು ಮುಂದುವರೆದಿವೆ. ಮಳೆಗೆ ಮನೆ ಗೋಡೆ ಕುಸಿತವಾಗಿ ನಾಲ್ವರು ಗಾಯಗೊಂಡಿರುವ ಘಟನೆ ಗೌಳಿ ನಗರದಲ್ಲಿ ನಡೆದಿದೆ. ಶಿವಮೊಗ್ಗ ತಾಲೂಕು ಆಗಸವಳ್ಳಿ ಸಮೀಪದ ಗೌಳಿ ನಗರದಲ್ಲಿನ ಬೀಬಿ ಜಾನ್ ಎಂಬುವರ ಮನೆಯ ಗೋಡೆ ಕುಸಿದು ಬಿದ್ದಿದೆ.
ಶಿವಮೊಗ್ಗದಲ್ಲಿ ಮನೆ ಗೋಡೆ ಕುಸಿದು ನಾಲ್ವರಿಗೆ ಗಾಯ, ಆಸ್ಪತ್ರೆಗೆ ದಾಖಲು - ಶಿವಮೊಗ್ಗದಲ್ಲಿ ಮನೆ ಗೋಡೆ ಕುಸಿತ
ಶಿವಮೊಗ್ಗದ ಗೌಳಿ ನಗರದಲ್ಲಿ ಮಳೆಗೆ ಬೀಬಿ ಜಾನ್ ಎಂಬುವವರ ಮನೆ ಗೋಡೆ ಕುಸಿದು ಬಿದ್ದು ನಾಲ್ವರು ಗಾಯಗೊಂಡಿದ್ದಾರೆ.
ಮಳೆಗೆ ಮನೆ ಗೋಡೆ ಕುಸಿತ
ಬೀಬಿ ಜಾನ್ (55), ಸಾಧಿಕ್(6) ಉಮರ್(7) ಹಾಗೂ ಅಬ್ದುಲ್(18) ಎಂಬುವರಿಗೆ ಗಾಯಗಳಾಗಿವೆ. ಇದರಲ್ಲಿ ಅಬ್ದುಲ್ ಎಂಬ ಯುವಕನ ಕಾಲಿನ ಮೇಲಿಯೇ ಗೋಡೆ ಬಿದ್ದು ಮೂಳೆ ಮುರಿದಿದೆ. ತಕ್ಷಣ ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಗೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತುಂಗಾ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಭಾರಿ ಮಳೆಗೆ ಎರಡನೇ ಬಾರಿ ಮುಳುಗಡೆಯಾದ ಭದ್ರಾವತಿಯ ಹೊಸ ಸೇತುವೆ: ಪರಿಹಾರಕ್ಕೆ ಕ್ರಮ