ಶಿವಮೊಗ್ಗ: ತುಂಗಾ ನಗರ ಪೊಲೀಸರು ಇಬ್ಬರು ಮನೆಗಳ್ಳರನ್ನು ಬಂಧಿಸಿದ್ದು 64 ಗ್ರಾಂ ಚಿನ್ನ ಹಾಗೂ 200 ಬೆಳ್ಳಿ ವಶಕ್ಕೆ ಪಡೆದುಕೊಂಡಿದ್ದಾರೆ. ತುಂಗಾನಗರ ಭಾಗದ ಮನೆಯಲ್ಲಿ ಕಳ್ಳತನವಾದ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ಪೊಲೀಸರು ತಬ್ರಕ್ ಉಲ್ಲಾ(20) ಹಾಗೂ ಸಯ್ಯದ್ ಸುಭಾನ್ (20) ಎಂಬಿಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬಯಲಾಗಿದೆ.
ಶಿವಮೊಗ್ಗದಲ್ಲಿ ಇಬ್ಬರು ಮನೆಗಳ್ಳರ ಬಂಧನ: 64 ಗ್ರಾಂ ಬಂಗಾರ, 200 ಗ್ರಾಂ ಬೆಳ್ಳಿ ವಶ - ತುಂಗಾನಗರ ಭಾಗದ ಮನೆಯಲ್ಲಿ ಕಳ್ಳತನ
ಶಿವಮೊಗ್ಗದ ತುಂಗಾನಗರದಲ್ಲಿ ಇಬ್ಬರು ಮನೆಗಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದಲ್ಲಿ ಇಬ್ಬರು ಮನೆಗಳ್ಳರ ಬಂಧನ
ಈ ಇಬ್ಬರು ಮನೆಗೆ ಬೀಗ ಹಾಕಿರುವುದನ್ನು ಗಮನಿಸಿ, ಕಳ್ಳತನಕ್ಕೆ ಸಂಚ ರೂಪಿಸುತ್ತಿದ್ದರು. ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಮಾತ್ರ ಕದಿಯುತ್ತಿದ್ದರು. ಈ ಹಿಂದೆಯೂ ಸಾಕಷ್ಟು ಅಪರಾಧ ಕೃತ್ಯಗಳ ಮೇಲೆ ಶಿಕ್ಷೆಗೂ ಗುರಿಯಾಗಿದ್ದರು. ಇದೀಗ ಎರಡು ಮನೆಗಳ ಕಳ್ಳತನದ ಮಾಹಿತಿ ದೊರಕಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ:ಕೋವಿಡ್ ರೋಗಿಗಳಿಗೆ ಸಹಾಯಧನ ಕೊಡಿಸುವುದಾಗಿ ವಂಚನೆ, ದೂರು ದಾಖಲು