ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಮಲವಕೊಪ್ಪದಲ್ಲಿ ಅಕ್ಕ ಪಕ್ಕದ ಎರಡು ಮನೆಗಳು ಕುಸಿದಿರುವ ಪರಿಣಾಮ ಮೂವರಿಗೆ ಗಾಯವಾಗಿರುವ ಘಟನೆ ನಡೆದಿದೆ.
ಶಿವಮೊಗ್ಗದಲ್ಲಿ ಭಾರಿ ಮಳೆ; ಮನೆ ಕುಸಿದು ಮೂವರಿಗೆ ಗಾಯ - ಮನೆ ಕುಸಿದು ಮೂವರಿಗೆ ಗಾಯ
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ನಗರದ ಮಲವಕೊಪ್ಪದಲ್ಲಿ ಅಕ್ಕ ಪಕ್ಕದ ಎರಡು ಮನೆಗಳು ಕುಸಿದು ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.
ಶಿವಮೊಗ್ಗದಲ್ಲಿ ಭಾರಿ ಮಳೆ; ಮನೆ ಕುಸಿದು ಮೂವರಿಗೆ ಗಾಯ
ಲಕ್ಕಮ್ಮ (55) ಜೀವನ (7) ಅಜೀತಾ ( 4) ಗಾಯಗಳಾಗಿದ್ದು, ನಗರದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಗೆ ಗಾಯಾಳುಗಳನ್ನ ಸೇರಿಸಲಾಗಿದೆ.
ಸ್ಥಳಕ್ಕೆ ಮಹಾನಗರ ಪಾಲಿಕೆ ಸ್ಥಳಿಯ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.