ಶಿವಮೊಗ್ಗ:ಹೊಸನಗರದ ಫುಡ್ ಇನ್ಸ್ಪೆಕ್ಟರ್ ದತ್ತಾತ್ರೇಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ನೀಡಿರುವ ದೂರಿನ ಆಧಾರದ ಮೇಲೆ ತಹಶೀಲ್ದಾರ್ ಸೇರಿದಂತೆ ಏಳು ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹೊಸನಗರದ ಫುಡ್ ಇನ್ಸ್ಪೆಕ್ಟರ್ ದತ್ತಾತ್ರೇಯ ತುಂಗಾ ನದಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇವರ ಆತ್ಮಹತ್ಯೆಗೆ ಹೊಸನಗರ ತಹಶೀಲ್ದಾರ್ ಶ್ರೀಧರಮೂರ್ತಿ ಸೇರಿದಂತೆ ಆನಂದ್ ಕಾರ್ವಿ, ನಾಗೇಂದ್ರ, ವಿಠಲ್, ಮುರುಗೇಶ್, ಶಶಿಕಲಾ, ವನಜಾಕ್ಷಿ ಎಂಬ ಏಳು ಜನ ಕಾರಣ ಎಂದು ಆರೋಪಿಸಿ ಹೊಸನಗರ ಪೊಲೀಸ್ ಠಾಣೆಯಲ್ಲಿ ದತ್ತಾತ್ರೇಯರ ಪತ್ನಿ ಅನುಸೂಯ ದೂರು ನೀಡಿದ್ದಾರೆ. ಅಲ್ಲದೆ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.