ಕರ್ನಾಟಕ

karnataka

ETV Bharat / state

ಹೊಸನಗರ ತಾಪಂ ಅಧ್ಯಕ್ಷ ಸ್ಥಾನ ಬಿಜೆಪಿ ತೆಕ್ಕೆಗೆ

ಹೊಸನಗರ ತಾಲೂಕಿನಾದ್ಯಂತ ಕುತೂಹಲ ಮೂಡಿಸಿದ್ದ ತಾಲೂಕು ಪಂಚಾಯತ್​ ಚುನಾವಣೆ ಇಂದು ನಡೆದಿದ್ದು, ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

By

Published : Mar 7, 2020, 6:46 PM IST

BJP won
ಗೆಲುವು ಸಾಧಿಸಿದ ಬಿಜೆಪಿ

ಶಿವಮೊಗ್ಗ: ಭಾರಿ ಕುತೂಹಲ ಕೆರಳಿಸಿದ್ದ ಹೊಸನಗರ ತಾಲೂಕು ಪಂಚಾಯತ್ ಅಧ್ಯಕ್ಷ ಚುನಾವಣೆಯಲ್ಲಿ ಕೊನೆಗೂ ಬಿಜೆಪಿ ಗೆಲುವು‌ ಸಾಧಿಸಿ ಗದ್ದುಗೆ ಏರಿದೆ.

ಹಿಂದಿನ ಅಧ್ಯಕ್ಷ ವಾಸಪ್ಪ ಗೌಡ ರಾಜೀನಾಮೆ ನೀಡಿದ ಕಾರಣ ಇಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಬಿಜೆಪಿಯ ವಿರೇಶ್ ಆಲುವಳ್ಳಿ, ಕಾಂಗ್ರೆಸ್ ಬಿ.ಜಿ.ಚಂದ್ರಮೌಳಿ ವಿರುದ್ಧ 2 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.

ಹೊಸನಗರ ತಾಲೂಕು ಪಂಚಾಯತ್​ನಲ್ಲಿ ಬಿಜೆಪಿಯು 7 ಸ್ಥಾನ ಹಾಗೂ ಕಾಂಗ್ರೆಸ್ 5 ಸ್ಥಾನಗಳನ್ನು ಹೊಂದಿದ್ದು, ಕಳೆದ ಅವಧಿಯಲ್ಲಿ ಬಿಜೆಪಿಯ ವಾಸಪ್ಪ ಗೌಡ ಪಕ್ಷದಲ್ಲಿ ಮುನಿಸಿಕೊಂಡು ಬಿಜೆಪಿಯಿಂದ ಕಾಂಗ್ರಸ್​ಗೆ ತೆರಳಿದ್ದರು.

ಇದೀಗ ಮತ್ತೆ ವಾಸಪ್ಪ ಗೌಡ ಬಿಜೆಪಿ ಪಕ್ಷಕ್ಕೆ ಮರಳಿದ್ದರಿಂದ ಮತ್ತೊಮ್ಮೆ ಚುನಾವಣೆ ನಡೆದಿದ್ದು, ಇದೀಗ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ವಿರೇಶ್ ಆಲುವಳ್ಳಿ ಅಧ್ಯಕ್ಷರಾಗಿ ಅಯ್ಕೆ ಆಗುತ್ತಿದ್ದಂತೆಯೇ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ABOUT THE AUTHOR

...view details