ಶಿವಮೊಗ್ಗ:ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆ ಬಳಿ ಸಿಕ್ಕ ಹತ್ತು ಸಾವಿರ ರೂಪಾಯಿ ಹಣವನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಶಿಕ್ಷಕರೊಬ್ಬರು ಪ್ರಾಮಾಣಿಕತೆ ಮೇರೆದಿದ್ದಾರೆ.
ಸಿಕ್ಕ ಹಣವನ್ನು ಪೊಲೀಸ್ ಠಾಣೆಗೆ ಒಪ್ಪಸಿ ಪ್ರಾಮಾಣಿಕತೆ ಮೆರೆದ ಶಿಕ್ಷಕ - shimoga honest teacher
ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆ ಬಳಿ ಸಿಕ್ಕ ಹತ್ತು ಸಾವಿರ ರೂಪಾಯಿ ಹಣವನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಶಿಕ್ಷಕರೊಬ್ಬರು ಪ್ರಾಮಾಣಿಕತೆ ಮೇರೆದಿದ್ದಾರೆ.
ಮಿಳಘಟ್ಟ ಶಾಲೆ ದೈಹಿಕ ಶಿಕ್ಷಕ ಶರಣಪ್ಪ ಅವರೇ ಆ ಪ್ರಾಮಾಣಿಕ ಶಿಕ್ಷಕ. ಅವರು ಶಾಲೆಯ ಕೆಲಸಕ್ಕಾಗಿ ಶಿವಮೊಗ್ಗ ಸಂಸದ ರಾಘವೇಂದ್ರ ಅವರ ಕಚೇರಿಗೆ ತೆರಳುತ್ತಿದ್ದರು. ಈ ವೇಳೆ ಅವರಿಗೆ ರಸ್ತೆಯಲ್ಲಿ 500 ರೂಪಾಯಿ ನೋಟಿನ ಕಂತೆ ಬಿದ್ದಿದ್ದು ಕಂಡಿದೆ. ಇದನ್ನು ಗಮನಿಸಿದ ಶರಣಪ್ಪ ಅವರು ಬೈಕ್ ನಿಲ್ಲಿಸಿ ಹಣವನ್ನು ಎತ್ತಿಕೊಂಡಿದ್ದಾರೆ.ಈ ವೇಳೆ ಸ್ಥಳದಲ್ಲಿದ್ದ ಕೆಲವರು ಹಣವನ್ನು ತಮಗೆ ಕೊಡುವಂತೆ ಕೇಳಿಕೊಂಡಿದ್ದಾರೆ. ಆದರೆ, ಆ ಹಣಕ್ಕೂ ಅವರಿಗೂ ಯಾವ ಸಂಬಂಧವೂ ಇಲ್ಲ ಅನ್ನುವುದು ಸ್ಪಷ್ಟವಾಗುತ್ತಿದ್ದಂತೆ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಅನಂತರ ಜಯನಗರ ಪೋಲೀಸ್ ಠಾಣೆಗೆ ಬಂದು ಹಣವನ್ನು ನೀಡಿ ಪ್ರಾಮಾಣಿಕತೆ ಮೇರೆದಿದ್ದಾರೆ.
ಶಿಕ್ಷಕರ ಈ ಪ್ರಾಮಾಣಿಕತೆಗೆ ಸಾವರ್ಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.