ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಕಾಶ್ಮೀರ ಮೂಲದ ಶಂಕಿತ ಉಗ್ರನ ಬಂಧನ: ಗೃಹ ಸಚಿವ ಆರಗ ಜ್ಞಾನೇಂದ್ರ - ಕಾಶ್ಮೀರ ಮೂಲದ ಶಂಕಿತ ಉಗ್ರನ ಬಂಧನದ ಬಗ್ಗೆ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ

ಆರ್​ಎಸ್​ಎಸ್​ ಕಚೇರಿ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ತಮಿಳುನಾಡಿನಲ್ಲಿ ಸೆಂಥೀಲ್ ಎಂಬುವವನನ್ನು ಬಂಧಿಸಿದ್ದಾರೆ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ

By

Published : Jun 7, 2022, 4:30 PM IST

Updated : Jun 7, 2022, 4:40 PM IST

ಶಿವಮೊಗ್ಗ:ಬೆಂಗಳೂರಿನಲ್ಲಿ ಕಾಶ್ಮೀರ ಮೂಲದ ಶಂಕಿತ ಉಗ್ರನನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ತಾಲೀಕ್ ಹುಸೇನ್ ಎಂಬ ವ್ಯಕ್ತಿಯನ್ನು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಈತ ಜಮ್ಮು ಕಾಶ್ಮೀರ ಭಯೋತ್ಪಾದಕರ ತಂಡದಲ್ಲಿ ಗುರುತಿಸಿಕೊಂಡಿದ್ದನು.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿದರು

ಕಾಶ್ಮೀರ ಪೊಲೀಸರೊಂದಿಗೆ ಕರ್ನಾಟಕದ ಪೊಲೀಸರು ಕೂಡ ಸಂಪರ್ಕದಲ್ಲಿ ಇದ್ದಾರೆ. ಇವತ್ತು ಒಂದು ಟೀಂ ಜಮ್ಮು- ಕಾಶ್ಮೀರಕ್ಕೆ ಹೋಗುತ್ತಿದ್ದಾರೆ. ಉಳಿದಂತೆ ಬೆಂಗಳೂರಿನಲ್ಲಿ ಯಾರು ಉಗ್ರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರನ್ನು ಹುಡುಕುವ ಕಾರ್ಯವನ್ನು ರಾಜ್ಯ ಪೊಲೀಸರು ಮಾಡುತ್ತಿದ್ದಾರೆ ಎಂದರು.

ಆರ್​ಎಸ್​ಎಸ್​ ಕಚೇರಿಗಳಿಗೆ ಬಂದೋಬಸ್ತ್:ಆರ್​ಎಸ್​ಎಸ್​ ಕಚೇರಿಗಳಿಗೆ ಬಾಂಬ್ ಬೆದರಿಕೆ ಬಂದಿದೆ ಎಂದು ದೆಹಲಿಯ ಮಾಧ್ಯಮದಲ್ಲಿ ಬಂದ ಹಿನ್ನೆಲೆಯಲ್ಲಿ ದೆಹಲಿಯ ಹಾಗೂ ರಾಜ್ಯದ ನಾಲ್ಕು ಆರ್​ಎಸ್​ಎಸ್​ ಕಚೇರಿಗಳಿಗೆ ಭದ್ರತೆ ಒದಗಿಸಲಾಗಿದೆ. ದೆಹಲಿಯಲ್ಲಿ ಇದರ ಬಗ್ಗೆ ವಿಶೇಷವಾದ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಆರ್​​ಎಸ್​​ಎಸ್ ಕಚೇರಿ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ತಮಿಳುನಾಡಿನಲ್ಲಿ ಸೆಂಥೀಲ್ ಎಂಬುವವನನ್ನು ಬಂಧಿಸಿದ್ದಾರೆ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ಎಲ್ಲ ಆರ್​ಎಸ್ಎಸ್​ ಕಚೇರಿಗಳಿಗೆ ಪೊಲೀಸ್ ಭದ್ರತೆ ಒದಗಿಸಲು ಸೂಚನೆ ಕೊಡಲಾಗಿದೆ ಎಂದರು.

ಸ್ಯಾಟಲೈಟ್​ನ ಪೋನ್ ಬಳಕೆ ಜಂಟಿ ಕಾರ್ಯಾಚರಣೆ: ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆ ಕುರಿತು ಕೇಂದ್ರ ಹಾಗೂ ರಾಜ್ಯ ಪೊಲೀಸರು ಜಂಟಿಯಾಗಿ ತನಿಖೆ ಮಾಡುತ್ತಿದ್ದಾರೆ. ನಿಷೇಧಿತ ಸ್ಯಾಟಲೈಟ್ ಫೋನ್ ಸಿಗ್ನಲ್ ಕಾರ್ಯಾಚರಣೆ ಕುರಿತು ರಾಜ್ಯದ ಪೊಲೀಸರು ಕೇಂದ್ರದ ಐ ಬಿ ಸಂಸ್ಥೆ ಸಿಬ್ಬಂದಿ ಜತೆಗೆ ಸಂಪರ್ಕದಲ್ಲಿ ಇದ್ದಾರೆ. ಜಂಟಿಯಾಗಿ ತನಿಖೆ ನಡೆಸಲಾಗುತ್ತಿದೆ ಎಂದರು.

ಓದಿ:ಚಡ್ಡಿಯೊಳಗೆ ಏನೂ ಇಲ್ಲ, ಇಬ್ಬರ ಜಗಳದಲ್ಲಿ ಚಡ್ಡಿ ವ್ಯಾಪಾರ ಕುದುರಿದೆಯಷ್ಟೇ: ಕುಮಾರಸ್ವಾಮಿ ವ್ಯಂಗ್ಯ

Last Updated : Jun 7, 2022, 4:40 PM IST

For All Latest Updates

TAGGED:

ABOUT THE AUTHOR

...view details