ಕರ್ನಾಟಕ

karnataka

ಸ್ಯಾಂಟ್ರೋ ರವಿ ವಶಕ್ಕೆ ಪಡೆಯಲು ಪೊಲೀಸ್​ ಕಮಿಷನರ್​ಗೆ ಸೂಚನೆ: ಆರಗ ಜ್ಞಾನೇಂದ್ರ

By

Published : Jan 7, 2023, 6:43 PM IST

ಸ್ಯಾಂಟ್ರೊ ರವಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಮೈಸೂರು ಪೊಲೀಸ್​ ಕಮಿಷನರ್​ಗೆ ಗೃಹ ಸಚಿವರ ಸೂಚನೆ - ಕುಮಾರಸ್ವಾಮಿ ಬಳಿ ಮಾಹಿತಿ ಇದ್ದರೆ ಅದನ್ನು ತನಿಖಾಧಿಕಾರಿಗೆ ಕಳುಹಿಸಿಕೊಡಲಿ - ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ

Home Minister Araga Gyanendra
ಸ್ಯಾಂಟ್ರೋ ರವಿ ವಶಕ್ಕೆ ಪಡೆಯಲು ಪೊಲೀಸ್​ ಕಮಿಷನರ್​ಗೆ ಸೂಚನೆ: ಆರಗ ಜ್ಞಾನೇಂದ್ರ

ಶಿವಮೊಗ್ಗ: ಮೈಸೂರಿನ ಸ್ಯಾಂಟ್ರೊ ರವಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಮೈಸೂರು ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸ್ಯಾಂಟ್ರೊ ರವಿ ಬಗ್ಗೆ ಮೈಸೂರಿನ ಪೊಲೀಸ್​ ಠಾಣೆಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಆತನ ಕೆಲಸವೇನು, ಹಿಂದೆ ಯಾವೆಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ ಎಂದು ಆತನನ್ನು ವಶಕ್ಕೆ ಪಡೆದು ಸಮಗ್ರ ತನಿಖೆ ಮಾಡಬೇಕೆಂದು ಪೊಲೀಸ್​ ಕಮಿಷನರ್​ಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.

ಯಾರ್ಯಾರು ಸ್ಯಾಂಟ್ರೊ ರವಿ ಮೇಲೆ ದೂರು ದಾಖಲಿಸಿದ್ದಾರೆ ಎಂದು ಸಮಗ್ರವಾಗಿ ತನಿಖೆ ನಡೆಸಬೇಕು, ಅವರ ಹಿನ್ನೆಲೆ ಅರ್ಥ ಮಾಡಿಕೊಳ್ಳಬೇಕು, ಹಿಂದೆ ಒಂದು ಬಾರಿ ಆತನ ಮೇಲೆ ಗೂಂಡಾ ಕಾಯ್ಧೆಯಾಡಿ ಪ್ರಕರಣ ದಾಖಲಾಗಿತ್ತು. ತಕ್ಷಣ ಆತನ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚನೆ ಕೂಟ್ಟಿದ್ದೇನೆ ಎಂದು ಗೃಹ ಸಚಿವರು ಇದೇ ವೇಳೆ ಸ್ಪಷ್ಟಪಡಿಸಿದರು. ಈ ಹಿಂದೆ ಸ್ಯಾಂಟ್ರೊ ರವಿ ರಾಜಕಾರಣಿಗಳೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ಹೌದು, ಆದರೆ ಕುಮಾರಸ್ವಾಮಿಯೊಂದಿಗೆ ಯಾವ ರೀತಿ ಸಂಬಂಧ ಇಟ್ಟುಕೊಂಡಿದ ಎಂದು ತಿಳಿದುಕೊಳ್ಳಬೇಕು.

ಏಕೆಂದರೆ, ಅವರಿಗೆ ಮಾತ್ರ ಫೋಟೋ ಸಿಗುತ್ತದೆ, ಆಡಿಯೋ ಸಿಗುತ್ತದೆ ಎಂದರೆ ಈ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಮಾಹಿತಿ ಕೊಟ್ಟು ಸಹಕರಿಸಬೇಕು. ಆತ ದುಷ್ಟ ಆಗಿದ್ದರೆ, ಆತನ ಮೇಲೆ ಕ್ರಮ ತೆಗೆದುಕೊಳ್ಳಲು ಅನುಕೂಲ ಆಗುತ್ತದೆ ಎಂದರು. ಕುಮಾರಸ್ವಾಮಿ ಬಳಿ ಮಾಹಿತಿ ಇದ್ದರೆ ಅದನ್ನು ತನಿಖಾಧಿಕಾರಿಗೆ ಕಳುಹಿಸಿಕೊಡಲಿ ಎಂದು ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಿಎಂಗೆ ಮನವಿ ಮಾಡಿದರು.

ಸಂಪುಟ ವಿಸ್ತರಣೆ ಬಗ್ಗೆ ಮಾಹಿತಿ ಇಲ್ಲ:ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿ ಸಂಪುಟ ವಿಸ್ತರಣೆಯ ಬಗ್ಗೆ ನನಗೆ ಮಾಹಿತಿ ಇಲ್ಲ. ಅದು ಸಿಎಂ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಇನ್ನು ಬೆಳಗ್ಗೆ ಯಡಿಯೂರಪ್ಪ ಅವರು, ಶೀಘ್ರದಲ್ಲಿಯೇ ಸಂಪುಟ ವಿಸ್ತರಣೆ ಎಂದು ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಡಿಯೂರಪ್ಪ ಅವರು ಹಿರಿಯರಿದ್ದಾರೆ. ಅವರಿಗೆ ತಿಳಿದಿರುತ್ತದೆ ಎಂದರು. ಗಡಿವಿವಾದ ಈಗ ಕೋರ್ಟ್ ನಲ್ಲಿದೆ. ನಮ್ಮ ಸರ್ಕಾರ ಗಡಿ ಕನ್ನಡಿಗರ ರಕ್ಷಣೆಗೆ ಬದ್ದವಾಗಿದೆ. ಸದ್ಯ ವಿವಾದ ಕೋರ್ಟ್​​ನಲ್ಲಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಅಮಿತ್ ಶಾ ಅವರು ಸೂಚನೆ ನೀಡಿದ್ದಾರೆ ಎಂದು ಗೃಹ ಸಚಿವರು ತಿಳಿಸಿದರು.

ಎನ್​ಐಎ ರಾಜ್ಯದಲ್ಲಿ ಟ್ರಯಲ್ ಬ್ಲಾಸ್ಟ್ ಕುರಿತು ತನಿಖೆ ಮುಂದುವರೆಸಿದೆ. ಎನ್​ಐಎ ಕೂಲಂಕಷವಾಗಿ ತನಿಖೆ ಮುಂದುವರೆಸಿದೆ. ಶಿವಮೊಗ್ಗ, ಹೂನ್ನಾಳಿ, ಉಡುಪಿಗಳಲ್ಲಿ ತನಿಖೆ ನಡೆಸಿದ್ದಾರೆ. ಶಿವಮೊಗ್ಗ, ಉಡುಪಿಯಲ್ಲಿ ಕೆಲವರನ್ನು ಬಂಧಿಸಿದ್ದಾರೆ. ಇದರಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರ ಇರುವುದು ಗೂತ್ತಾಗಿದೆ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದರು. ಕಾಂಗ್ರೆಸ್​​ನವರಿಗೆ ಮುಸ್ಲಿಂ ವೋಟು ಬೇಕಾಗಿದೆ. ಇದರಿಂದ ಯಾರೇ ತಪ್ಪು ಮಾಡಿದರೂ ಖಂಡಿಸುವ ಶಕ್ತಿ ಅವರಿಗಿಲ್ಲ, ಅವರು ಓಲೈಕೆ ರಾಜಕಾರಣದಿಂದ ಅಧಿಕಾರದಲ್ಲಿದ್ದರು.

ಈಗ ಉಳಿದ ಧರ್ಮದವರಿಗೆ ಗೊತ್ತಾಗಿದೆ. ದೇಶದ ಹಿತ ಮತ್ತು ಜನರ ಹಿತ ಬಲಿಕೊಟ್ಟು ಒಂದು ವರ್ಗವನ್ನು ತುಷ್ಟೀಕರಣ ಮಾಡಿ ಇವರು ಸಿಂಹಾಸನ ಏರಬೇಕು ಎಂದು ಮಾಡುತ್ತಿರುವ ಪ್ರಯತ್ನಕ್ಕೆ ಎಲ್ಲ ಕಡೆ ಅವರನ್ನು ಇಡೀ ದೇಶದಲ್ಲಿ ಮುಗಿಸಿದ್ದಾರೆ. ಕರ್ನಾಟಕದಲ್ಲಿ ಇನ್ನೂ ಉಸಿರಾಡುತ್ತಿದ್ದಾರೆ ಮುಂದಿನ ಚುನಾವಣೆಯಲ್ಲಿ ಅದು ಮುಗಿಯುತ್ತದೆ ಎಂದು ವ್ಯಂಗ್ಯವಾಡಿದರು.

ಸಿಎಂ ಹಾಗೂ ಆರ್​ಎಸ್​ಎಸ್ ಬಗ್ಗೆ ಕಿಳು ಮಟ್ಟದಲ್ಲಿ ಮಾತನಾಡಿದರೆ ಓಟು ಬರುತ್ತದೆ ಎಂಬ ಉದ್ದೇಶದಿಂದ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ, ಅವರು ಬಾಯಿಗೆ ಬಂದ ಆಗೆ ಮಾತನಾಡುತ್ತಿದ್ದಾರೆ, ಬಹಳ ಕೀಳು ಮಟ್ಟದ ರಾಜಕರಣ ಮಾಡುತ್ತಿದ್ದಾರೆ, ಯಾಗೇ ಮಾತನಾಡಬೇಕು ಏನು ಮಾತನಾಡಬೇಕು ಎಂಬ ಸಂಸ್ಕೃತಿ ಘನತೆ ಇಲ್ಲದ ಮಾಜಿ ಮುಖ್ಯಮಂತ್ರಿ ಅವರು ಎಂದು ಸಿದ್ದರಾಮಯ್ಯ ವಿರುದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದರು.

ಇದನ್ನೂ ಓದಿ:ಸ್ಯಾಂಟ್ರೋ ರವಿಗೆ ಆಶ್ರಯ ನೀಡಿರುವ ಆರೋಪ: ಕುಮಾರಕೃಪ ಗೆಸ್ಟ್ ಹೌಸ್ ಅಧಿಕಾರಿ ಎತ್ತಂಗಡಿ

ABOUT THE AUTHOR

...view details