ಕರ್ನಾಟಕ

karnataka

ETV Bharat / state

ಮರಳು, ಕಲ್ಲು ಹಾಗೂ ರಿಯಲ್ ಎಸ್ಟೆಟ್​​ ವಿಚಾರಕ್ಕೆ ಪೊಲೀಸರು ಕೈ ಜೋಡಿಸಿದರೆ ಕಠಿಣ ಕ್ರಮ : ಆರಗ ಜ್ಞಾನೇಂದ್ರ

ನನ್ನ ಜಿಲ್ಲೆಯಲ್ಲಿ ಕ್ರೈಂ ಹೆಚ್ಚಾದರೆ ನನಗೆ ಮಾಧ್ಯಮದವರು ಪ್ರಶ್ನೆ ಮಾಡುತ್ತಾರೆ. ಪೊಲೀಸರು ಸ್ವಲ್ಪ ಭಯದಿಂದ ಕೆಲಸ ಮಾಡಿದ್ರೆ, ಸಾಕಾಗಾತ್ತದೆ. 32 ಪಿಎಸ್​​ಐ ಹುದ್ದೆ ಖಾಲಿ‌ ಇದೆ. 545 ಜನರ ಫಲಿತಾಂಶ ಬಂದಿದೆ. ಅವರ ಟ್ರೈನಿಂಗ್ ಮುಗಿದ ನಂತರ ಅವರು ಕರ್ತವ್ಯಕ್ಕೆ ಬಂದಾಗ ಎಲ್ಲವು ಸರಿ ಆಗುತ್ತದೆ..

ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ

By

Published : Jan 25, 2022, 5:26 PM IST

ಶಿವಮೊಗ್ಗ:ಮರಳು, ಕಲ್ಲು ಹಾಗೂ ರಿಯಲ್ ಎಸ್ಟೆಟ್​​ಗೆ ಕೈ ಜೋಡಿಸಿದರೆ ಕಠಿಣ ಕ್ರಮ ತೆಗದುಕೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ ಇಂದು ಜಿಲ್ಲಾ ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲಾ ಪೊಲೀಸರ ಪ್ರಗತಿ ಪರಿಶೀಲನೆಯನ್ನು ನಡೆಸಿದ್ದೇನೆ. ನನ್ನ ಜಿಲ್ಲೆ ಅಂತಾ ತಡವಾಗಿ ಸಭೆ ನಡೆಸಿದ್ದೇನೆ.

ಎಲ್ಲಾ ಪೊಲೀಸರ ಸಮ್ಮುಖದಲ್ಲಿ ಸಭೆ ನಡೆಸಲಾಗಿದೆ. ಅಪರಾಧಗಳ ಸಂಖ್ಯೆ ಕಳೆದ ಎರಡು ಸಾಲಿಗೆ ಹೋಲಿಸಿದರೆ ಕಡಿಮೆ ಇದೆ. ಇದು ಸಮಾಧಾನಕರ ವಿಷಯವಾಗಿದೆ ಎಂದರು.

ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಎಚ್ಚರಿಕೆನೀಡಿರುವುದು..

ಬೀಟ್ ಹೆಚ್ಚಿಸಿದರೆ, ಕ್ರೈಂ ಕಡಿಮೆ ಆಗುತ್ತದೆ. ಇನ್ನಷ್ಟು ಬೀಟ್ ವ್ಯವಸ್ಥೆ ಹೆಚ್ಚಿಸಬೇಕೆಂದು ತಿಳಿಸಿದ್ದೇನೆ‌. ಜಾನುವಾರು ಸಾಗಾಟ ತುಂಬ ಕಡಿಮೆಯಾಗಿದೆ. ಗಾಂಜಾ ಮತ್ತು ಡ್ರಗ್ಸ್ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಭದ್ರಾವತಿ ಮತ್ತು ಶಿವಮೊಗ್ಗ ನಗರದ ಪೊಲೀಸರು ಹೆಚ್ಚಿನ ಕೆಲಸ ಮಾಡುತ್ತಿದ್ದಾರೆ‌.

ಆಂಧ್ರ, ದಾವಣಗೆರೆಯಿಂದ ಗಾಂಜಾ ಮಾರಾಟಗಾರರನ್ನು ಕರೆ ತರುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗಾಂಜಾ ಸೇವನೆ ಮಾಡುವವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಅಪರಾಧ ಕಡಿಮೆ ಆಗುತ್ತಿದೆ. ಇನ್ನುಷ್ಟು ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದರು.

ನನ್ನ ಜಿಲ್ಲೆಯಲ್ಲಿ ಕ್ರೈಂ ಹೆಚ್ಚಾದರೆ ನನಗೆ ಮಾಧ್ಯಮದವರು ಪ್ರಶ್ನೆ ಮಾಡುತ್ತಾರೆ. ಪೊಲೀಸರು ಸ್ವಲ್ಪ ಭಯದಿಂದ ಕೆಲಸ ಮಾಡಿದ್ರೆ, ಸಾಕಾಗಾತ್ತದೆ. 32 ಪಿಎಸ್​​ಐ ಹುದ್ದೆ ಖಾಲಿ‌ ಇದೆ. 545 ಜನರ ಫಲಿತಾಂಶ ಬಂದಿದೆ. ಅವರ ಟ್ರೈನಿಂಗ್ ಮುಗಿದ ನಂತರ ಅವರು ಕರ್ತವ್ಯಕ್ಕೆ ಬಂದಾಗ ಎಲ್ಲವು ಸರಿ ಆಗುತ್ತದೆ. ಹಾಗೆಯೇ ಜಿಲ್ಲೆಯಲ್ಲಿ 105 ಕಾನ್ಸ್‌ಟೇಬಲ್‌ ಹುದ್ದೆ ಖಾಲಿ‌ ಇವೆ, ಕಾನ್ಸ್‌ಟೇಬಲ್​​ಗಳು ತರಬೇತಿಯಲ್ಲಿರುವವರು ಬಂದ್ರೆ ಎಲ್ಲಾ‌ ಸರಿ ಹೋಗುತ್ತದೆ ಎಂದರು.

ಪೊಲೀಸರಿಗೆ ವಸತಿ ಒದಗಿಸಲಾಗುತ್ತಿದೆ. ಪೊಲೀಸ್ ಠಾಣೆಗಳ ಕಟ್ಟಡಕ್ಕಾಗಿ 200 ಕೋಟಿ ರೂ.ಗಳನ್ನು ನೀಡಲಾಗಿದೆ. ಇದರಲ್ಲಿ ಶಿವಮೊಗ್ಗದ ಸಂಚಾರಿ ಪೊಲೀಸ್ ಠಾಣೆ, ಶಿವಮೊಗ್ಗ ಗ್ರಾಮಾಂತರ ಠಾಣೆ ಹಾಗೂ ತೀರ್ಥಹಳ್ಳಿಯ ಠಾಣೆಗಳನ್ನು ಹೊಸದಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಪಿಎಸ್ಐ ಪರೀಕ್ಷೆ ಅಕ್ರಮದ ಕುರಿತು ಪರಿಕ್ಷಾರ್ಥಿಗಳು ಉತ್ತರ ಪತ್ರಿಕೆಯನ್ನು‌ ಪಡೆದು ನೋಡಬಹುದಾಗಿದೆ. 1 ಲಕ್ಷ ಜನರು ಪರೀಕ್ಷೆ ಬರೆದಿದ್ದಾರೆ‌. ಇದರಲ್ಲಿ 450 ಜ‌ನ ಆಯ್ಕೆಯಾಗಿದ್ದಾರೆ. ಉಳಿದವರಿಗೆ ಅಸಹನೆ ಇದ್ದೇ ಇರುತ್ತದೆ. ಅಪೀಲ್​​​ ಹೋದ್ರೆ ಈ ಕುರಿತು ತನಿಖೆ ನಡೆಸಲಾಗುವುದು ಎಂದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮದ ಕುರಿತ ವಿಡಿಯೋ ಹಳೆಯದು‌ ಎಂದು ತಿಳಿದಿದೆ. ಹಿಂದೆ ಸೂಕ್ತ ಕ್ರಮ ತೆಗೆದುಕೊಂಡ ಕಾರಣ ಹಾಗೆ ಆಗಿರುವುದಕ್ಕೆ ಸಾಧ್ಯವಿಲ್ಲ ಎಂದರು.

ಬಸನಗೌಡ ಪಾಟೀಲ್​​​ ಯತ್ನಾಳ್ ಹೇಳಿಕೆಗೆ ಪ್ರತಿಕ್ರಯಿಸಿದ ಅವರು, ಅವರು ನಮ್ಮ ಸ್ನೇಹಿತರು, ಅವರು ಹೇಳಿದಂತೆ ಆಗಲ್ಲ, ಯಾರಾದರೂ ಈಗ ಬಿಜೆಪಿ ಬಿಟ್ಟು ಹೋಗುತ್ತಾರಾಯೇ, ಹಾಗೇನಾದ್ರೂ ಬಿಜೆಪಿ ಬಿಟ್ಟು ಹೋದ್ರೆ ಅವರಿಗೆ ಭವಿಷ್ಯವಿಲ್ಲ ಎಂದರು.

ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ABOUT THE AUTHOR

...view details