ಶಿವಮೊಗ್ಗ:ಹರ್ಷನ ಮರಣ ವ್ಯರ್ಥ ಆಗಲು ಬಿಡುವುದಿಲ್ಲ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಹತ್ಯೆಯಾದ ಹರ್ಷನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಆ್ಯಕ್ಟ್ ಹಾಕಿದರೂ ಉದ್ದೇಶ ಶಿಕ್ಷೆಯಾಗಬೇಕು ಎಂಬುದು. ಶಿಕ್ಷೆ ಆಗುವಂತಹ ಕೆಲಸ ಖಂಡಿತವಾಗಿ ಆಗುತ್ತೆ. ಹರ್ಷನ ಮರಣ ವ್ಯರ್ಥ ಆಗಲು ಬಿಡುವುದಿಲ್ಲ. ಆ ನಿಟ್ಟಿನಲ್ಲಿ ಸರ್ಕಾರ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತೆ ಎಂದರು.
ಹರ್ಷನ ಮರಣ ವ್ಯರ್ಥ ಆಗಲು ಬಿಡುವುದಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ - ಹರ್ಷನ ಮರಣ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ
ಹರ್ಷನ ಮರಣ ವ್ಯರ್ಥ ಆಗಲು ಬಿಡುವುದಿಲ್ಲ. ಆ ನಿಟ್ಟಿನಲ್ಲಿ ಸರ್ಕಾರ, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ
ಎಡಿಜಿಪಿ ರ‍್ಯಾಂಕಿನ ಎರಡು ಜನ ಅಧಿಕಾರಿಗಳು ಹಾಗೂ ಐಜಿಗಳು ಸಹ ಇಲ್ಲೇ ಇದ್ದು, ಲೋಕಲ್ ಪೊಲೀಸರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಇನ್ನೂ ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು. ಹಾಗಾಗಿ, ವಿಸ್ತಾರ ತನಿಖೆ ನಡೆಯುತ್ತಿದೆ. ಸಮಾಜ ಹಂತಕರಿಗೆ ಸುಮ್ಮನೆ ಬಿಡುವುದಿಲ್ಲ ಹಾಗೂ ಇಂತಹ ಘಟನೆಗಳು ಮುಂದೆ ಆಗಲು ಬಿಡಲ್ಲ ಎಂದರು.
ಓದಿ:ತೋಟದ ಮನೆಯಲ್ಲಿ ಕತ್ತು ಸೀಳಿ ವ್ಯಕ್ತಿಯ ಬರ್ಬರ ಕೊಲೆ.. ಕೆ ಆರ್ ನಗರದಲ್ಲಿ ಹರಿಯಿತು ನೆತ್ತರು