ಶಿವಮೊಗ್ಗ: ರೌಡಿ ಶೀಟರ್ ಹಂದಿ ಅಣ್ಣಿ ಕೊಲೆಪಾತಕರನ್ನು ಪೊಲೀಸರು ಶೀಘ್ರದಲ್ಲಿಯೇ ಬಂಧಿಸಲಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ. ಈ ಕುರಿತು ತೀರ್ಥಹಳ್ಳಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ರೌಡಿ ಶೀಟರ್ ಹಂದಿ ಅಣ್ಣಿಯ ಕೊಲೆ ನಡೆದಿದೆ. ನಮ್ಮ ಪೊಲೀಸರಿಗೆ ಮಾಹಿತಿ ಇದೆ. ಅವರು ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಹಂದಿ ಅಣ್ಣಿ ಕೊಲೆ ಪಾತಕರನ್ನು ಪೊಲೀಸರು ಶೀಘ್ರದಲ್ಲಿಯೇ ಬಂಧಿಸಲಿದ್ದಾರೆ: ಗೃಹ ಸಚಿವ ಆರಗ ಜ್ಞಾನೇಂದ್ರ - ಹಂದಿ ಅಣ್ಣಿ ಕೊಲೆ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ
ಶಿವಮೊಗ್ಗದಲ್ಲಿ ರೌಡಿ ಶೀಟರ್ ಹಂದಿ ಅಣ್ಣಿಯ ಕೊಲೆ ನಡೆದಿದೆ. ನಮ್ಮ ಪೊಲೀಸರಿಗೆ ಮಾಹಿತಿ ಇದೆ. ಅವರು ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿರುವುದು
ಇದು ಹಳೇ ದ್ವೇಷದಿಂದ ನಡೆದಿರುವ ಕೊಲೆಯಂತೆ ಕಾಣಿಸುತ್ತಿದೆ. ಶಿವಮೊಗ್ಗ ರೌಡಿಗಳ ಕೇಂದ್ರವಾಗಿದೆ. ಅದು ಕೊತ್ವಾಲ್ ರಾಮಚಂದ್ರನಿಂದ ಹಿಡಿದು ರೌಡಿ ಪರಂಪರೆ ಮುಂದುವರೆದುಕೊಂಡು ಬಂದಿದೆ. ಜಿಲ್ಲೆಯಲ್ಲಿ ರೌಡಿಗಳನ್ನು ಮಟ್ಟ ಹಾಕಬೇಕಿದೆ. ನಾನು ರೌಡಿಗಳ ಅಟ್ಟಹಾಸವನ್ನು ತೊಡೆದು ಹಾಕುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದರು.
ಓದಿ:ತುಂಗಭದ್ರಾ ನೀರಿನ ಮಟ್ಟದಲ್ಲಿ ಏರಿಕೆ: ನದಿಪಾತ್ರದ ಗ್ರಾಮಗಳ ಜನರಿಗೆ ರೆಡ್ ಅಲರ್ಟ್