ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಕೊರೊನಾ ನಡುವೆಯೇ ಅದ್ಧೂರಿ ಹೋಳಿ ಆಚರಣೆ

ಶಿವಮೊಗ್ಗದಲ್ಲಿ ಹೋಳಿ ಹುಣ್ಣಿಮೆಯ ಮರುದಿನ ಅದ್ದೂರಿಯಾಗಿ ಹೋಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.

Shivamogga
ಶಿವಮೊಗ್ಗದಲ್ಲಿ ಹೋಳಿ ಆಚರಣೆ

By

Published : Mar 29, 2021, 2:03 PM IST

ಶಿವಮೊಗ್ಗ:ಕೋವಿಡ್ ನಡುವೆಯೂ ಶಿವಮೊಗ್ಗದಲ್ಲಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಗಿದೆ. ರಾಜ್ಯದ ಎಲ್ಲಾ ಕಡೆ ಹೋಳಿ ಹುಣ್ಣಿಮೆ ದಿನ ಹೋಳಿ ಹಬ್ಬ ಆಚರಣೆ ಮಾಡಿದರೆ, ಶಿವಮೊಗ್ಗದಲ್ಲಿ ಹೋಳಿ ಹುಣ್ಣಿಮೆಯ ಮರುದಿನದ ಹೋಳಿಯನ್ನು ಆಚರಣೆ ಮಾಡಲಾಗುತ್ತದೆ.

ಶಿವಮೊಗ್ಗ ಹೃದಯಭಾಗದಲ್ಲಿ ಇರುವ ದುರ್ಗಿಗುಡಿಯ ದುರ್ಗಾದೇವಿಯ ರಥೋತ್ಸವ ನಡೆದ ಮರುದಿನ ಶಿವಮೊಗ್ಗ ನಗರಾದ್ಯಂತ ಹೋಳಿ ಆಚರಣೆ ನಡೆಸಲಾಗುತ್ತದೆ. ಇಂದು ನಗರದ ಇತರೆಡೆಕ್ಕಿಂತ ದುರ್ಗಿಗುಡಿಯಲ್ಲಿ ಹೋಳಿಯು ಜೋರಾಗಿ ನಡೆಸಲಾಯಿತು. ಬೆಳಗ್ಗೆಯಿಂದಲೇ ಮಕ್ಕಳು, ಯುವಕರು ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಸಂಭ್ರಮ ಪಟ್ಟರು.

ಶಿವಮೊಗ್ಗದಲ್ಲಿ ಹೋಳಿ ಆಚರಣೆ

ದುರ್ಗಿಗುಡಿಯ ದುರ್ಗಮ್ಮನ ಬೀದಿಯಲ್ಲಿ ಯುವಕರು ಮಡಿಕೆ ಕಟ್ಟಿ ನೃತ್ಯ ಮಾಡುತ್ತಾ, ಸಂತೋಷದಿಂದ ಕುಣಿದು ಕುಪ್ಪಳಿಸಿ, ಮಡಿಕೆ ಹೊಡೆದು ಸಂಭ್ರಮಿಸಿದರು.

ABOUT THE AUTHOR

...view details