ಶಿವಮೊಗ್ಗ: ದೀಪಾವಳಿ ಹಬ್ಬ ಮಲೆನಾಡಿನಲ್ಲಿ ಪ್ರಾಮುಖ್ಯತೆ ಹೊಂದಿದೆ. ರೈತರಿಗೆ ದೀಪಾವಳಿ ಹಬ್ಬ ಪ್ರಮುಖ ಹಬ್ಬವಾಗಿದೆ. ಈ ಹಿನ್ನೆಲೆ ಹಬ್ಬ ಆಚರಣೆಗಾಗಿ ತಮ್ಮ ಹುಟ್ಟೂರಿಗೆ ಆಗಮಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಮನೆ ಮನೆಗೆ ತೆರಳಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಹಿಸಣ ಹೊಸ್ಕೇರಿ ಗ್ರಾಮಕ್ಕೆ ತೆರಳಿ ಪ್ರತಿ ವರ್ಷ ಪೂಜೆ ಹಬ್ಬ ಆಚರಿಸುತ್ತಾರೆ. ಈ ವರ್ಷವೂ ಸಹ ಮನೆ ಮನೆಗೆ ತೆರಳಿ ಸಿಹಿ ಹಂಚಿದ್ದಾರೆ.