ಶಿವಮೊಗ್ಗ:ವರದಾ ನದಿ ಪ್ರವಾಹದಿಂದಾಗಿ ಐತಿಹಾಸಿಕ ಜೈನ ಮಠ ಮುಳುಗಡೆಯಾಗಿದೆ. ದೇವಸ್ಥಾನ ಮತ್ತು ಶಾಲಾ ವಿದ್ಯಾರ್ಥಿ ನಿಲಯಕ್ಕೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಹಾನಿಯಂಟಾಗಿದೆ. ಮಠದ ಜೀರ್ಣೋದ್ಧಾರಕ್ಕಾಗಿ ನೆರವು ನೀಡಬೇಕೆಂದು ಮುಖ್ಯಮಂತ್ರಿಗಳಲ್ಲಿ ವೃಷಭ ಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಮನವಿ ಮಾಡಿದ್ದಾರೆ.
ವರದಾ ನದಿ ಪ್ರವಾಹಕ್ಕೆ ಐತಿಹಾಸಿಕ ಶ್ರೀಮೋಕ್ಷ ಮಂದಿರ ಮುಳುಗಡೆ
ಮಲೆನಾಡಿನಲ್ಲಿ ಸುರಿದ ಭಾರಿ ಮಳೆಗೆ ಐತಿಹಾಸಿಕ ಜೈನ ಮಠ ಮುಳುಗಡೆಯಾಗಿದೆ. ದೇವಸ್ಥಾನ ಮತ್ತು ಶಾಲಾ ವಿದ್ಯಾರ್ಥಿ ನಿಲಯಕ್ಕೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ಸಹಾಯಕ್ಕಾಗಿ ಮುಖ್ಯಮಂತ್ರಿಗಳಲ್ಲಿ ವೃಷಭ ಸೇನಾ ಭಟ್ಟಾರಕ ಮಹಾಸ್ವಾಮಿಗಳು ಮನವಿ ಮಾಡಿದ್ದಾರೆ.
ಮಲೆನಾಡಿನಲ್ಲಿ ಸುರಿದ ಭಾರಿ ಮಳೆಗೆ ವರದಾ ನದಿಯ ಪ್ರವಾಹದಿಂದಾಗಿ ಸೊರಬ ತಾಲೂಕಿನ ಲಕ್ಕವಳ್ಳಿಯಲ್ಲಿರುವ ಐತಿಹಾಸಿಕ ಶ್ರೀಮೋಕ್ಷ ಮಂದಿರ ಸಂಸ್ಥಾನ ಜೈನ ಮಠ ಸಾಕಷ್ಟು ಹಾನಿಯಾಗಿದೆ. ಮಠದ ಶಾಲೆ, ಗೋಶಾಲೆ ಸೇರಿದಂತೆ ಮಠ ನೀರಿನಿಂದ ಆವೃತವಾಗಿದೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಮಠಕ್ಕೆ ಸಾಕಷ್ಟು ಹಾನಿಯಾಗಿದ್ದು, ಕೋಟ್ಯಂತರ ರೂ. ನಷ್ಟವಾಗಿದೆ.
ಸರ್ಕಾರ ತಕ್ಷಣವೇ ಮಠದ ಜೀರ್ಣೋದ್ಧಾರಕ್ಕೆ ಮುಂದಾಗಿ ವರದಾ ನದಿಗೆ ತಡೆಗೋಡೆ ನಿರ್ಮಿಸಿಕೊಡಬೇಕು. ಕೇವಲ ಜೈನರಲ್ಲದೆ ಎಲ್ಲಾ ಧರ್ಮದವರು ಮಠಕ್ಕೆ ಬರುತ್ತಾರೆ. ಮಠವು ಬಡಮಕ್ಕಳಿಗಾಗಿ ಉಚಿತ ಶಿಕ್ಷಣ ನೀಡುತ್ತಿದೆ. ಐತಿಹಾಸಿಕ ಧಾರ್ಮಿಕ ಮಠವು ನೆರೆಯಿಂದ ಹಾನಿಗೊಳಗಾಗಿದೆ. ಮುಖ್ಯಮಂತ್ರಿಗಳು ಕೂಡಲೇ ಮಠದ ಜೀರ್ಣೋದ್ಧಾರಕ್ಕೆ ನೆರವು ನೀಡಬೇಕು ಎಂದು ಮಠದ ಗುರುಗಳು ವೃಷಭ ಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಮನವಿ ಮಾಡಿದರು.