ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಭಾನುವಾರ ಹಿಂದು ಜಾಗರಣ ವೇದಿಕೆ ಪ್ರಾಂತ ಸಮ್ಮೇಳನ: ಸಾದ್ವಿ ಪ್ರಜ್ಞಾ ಸಿಂಗ್ ಭಾಗಿ

ಡಿಸೆಂಬರ್​ 25 ರಂದು ಹಿಂದು ಜಾಗರಣ ವೇದಿಕೆಯ 3ನೇ ವಾರ್ಷಿಕ ಪ್ರಾಂತ ಸಮ್ಮೇಳನವು ಶಿವಮೊಗ್ಗದಲ್ಲಿ ನಡೆಯಲಿದೆ.

Hindu Jagarana Vedike
ಹಿಂದು ಜಾಗರಣ ವೇದಿಕೆ

By

Published : Dec 23, 2022, 5:43 PM IST

Updated : Dec 23, 2022, 8:38 PM IST

ಹಿಂದು ಜಾಗರಣ ವೇದಿಕೆಯ 3ನೇ ವಾರ್ಷಿಕ ಪ್ರಾಂತ ಸಮ್ಮೇಳನ ಕುರಿತು ಸ್ವಾಗತ ಸಮಿತಿ ಅಧ್ಯಕ್ಷ ಡಾ.ತೇಜಸ್ವಿ ಮಾಹಿತಿ ನೀಡಿದರು.

ಶಿವಮೊಗ್ಗ :ಹಿಂದು ಜಾಗರಣ ವೇದಿಕೆಯ 3ನೇ ವಾರ್ಷಿಕ ಪ್ರಾಂತ ಸಮ್ಮೇಳನವು ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಮೈದಾನದಲ್ಲಿ ಡಿಸೆಂಬರ್ 25ರಂದು ನಡೆಯಲಿದೆ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಚಾಲಕ ದೂ.ಕೇಶವಮೂರ್ತಿ ತಿಳಿಸಿದರು. ಎನ್.ಇ.ಎಸ್. ಮೈದಾನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ವೇದಿಕೆಯು ಪ್ರತಿ 3 ವರ್ಷಕ್ಕೊಮ್ಮೆ ತನ್ನ ಕಾರ್ಯಕರ್ತರನ್ನು ಒಗ್ಗೂಡಿಸುವ ಸಮಾಗಮ ಹಾಗೂ ಸಾರ್ವಜನಿಕ ಸಭೆ ನಡೆಸುತ್ತದೆ ಎಂದು ಹೇಳಿದರು.

ಇದಕ್ಕಾಗಿ ಶಿವಮೊಗ್ಗದಲ್ಲಿ ಪ್ರಾಂತ ಸಮ್ಮೇಳನ ನಡೆಸಲಾಗುತ್ತಿದೆ. ಕರ್ನಾಟಕ ದಕ್ಷಿಣ ಪ್ರಾಂತದ 16 ಜಿಲ್ಲೆಗಳಿಂದ ಸುಮಾರು 4000 ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಭಾನುವಾರ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗಿ ನಂತರ ಬೆಳಗ್ಗೆ 11:30 ಕ್ಕೆ ಸಂಘಟನೆ ಹಿಂದೂ ಸಮಾಜ ಎದುರಿಸುತ್ತಿರುವ ಸವಾಲುಗಳು ಮತ್ತು ಪರಿಹಾರದ ಕುರಿತು ಗೋಷ್ಟಿ ನಡೆಯುತ್ತದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಡಾ.ತೇಜಸ್ವಿ ಎಂದು ತಿಳಿಸಿದರು.

ಮಧ್ಯಾಹ್ನ ಊಟದ ಬಿಡುವು ಮುಗಿದ ಮೇಲೆ 2:30 ಕ್ಕೆ ಶೋಭಾಯಾತ್ರೆ ಪ್ರಾರಂಭಿಸಲಾಗುತ್ತದೆ. ಎಸ್.ಪಿ.ಎಂ ರಸ್ತೆಯಿಂದ ರಾಮಣ್ಣಶ್ರೇಷ್ಠಿ ಪಾರ್ಕ್‌ನಿಂದ ಗಾಂಧಿ ಬಜಾರ್, ಶಿವಪ್ಪನಾಯಕ ವೃತ್ತ, ಎ.ಎ.ವೃತ್ತ, ನೆಹರು ರಸ್ತೆ, ಗೋಪಿ ವೃತ್ತ, ಬಾಲರಾಜ್ ಅರಸ್ ರಸ್ತೆ, ಮಹಾವೀರ ವೃತ್ತದ ಮೂಲಕ ಎನ್.ಇ.ಎಸ್ ಶೋಭಯಾತ್ರೆ ಮೈದಾನ ತಲುಪಲಿದೆ.

ನಂತರ ಸಂಜೆ 4:30 ಕ್ಕೆ ಸಾರ್ವಜನಿಕ ಸಭೆ ನಡೆಯಲಿದೆ. ಮುಖ್ಯ ಅತಿಥಿಯಾಗಿ ಉದ್ಯಮಿ ರಾಮ್ ಮನೋಹರ್ ಶಾಂತವೇರಿ ಪಾಲ್ಗೊಳ್ಳುವರು. ಪ್ರಾಸ್ತಾವಿಕ ಭಾಷಣವನ್ನು ಜಗದೀಶ್ ಕಾರಂತ್ ಮಾಡಲಿದ್ದಾರೆ. ದಿಕ್ಸೂಚಿ ಭಾಷಣವನ್ನು ಸಾದ್ವಿ ಪ್ರಜ್ಞಾಸಿಂಗ್ ಠಾಕೂರ್ ಮಾಡಲಿದ್ದಾರೆ ಎಂದರು.

ಇದನ್ನೂ ಓದಿ:ಶಾಲೆಯಲ್ಲಿ ಸಮವಸ್ತ್ರ ಕಡ್ಡಾಯಕ್ಕೆ ಹಿಂದು ಜಾಗರಣ ವೇದಿಕೆ ಆಗ್ರಹ..

Last Updated : Dec 23, 2022, 8:38 PM IST

ABOUT THE AUTHOR

...view details