ಕರ್ನಾಟಕ

karnataka

ETV Bharat / state

ಭಾರಿ ಮಳೆಗೆ ಜೋಗದಲ್ಲಿ ಕೆಪಿಸಿ ಮನೆಗಳ ಮುಂದಿನ ಗುಡ್ಡ ಕುಸಿತ - ಜೋಗದ ಕೆಪಿಸಿ ಮನೆಗಳ ಮುಂದಿನ ಗುಡ್ಡ ಕುಸಿತ

ಶಿವಮೊಗ್ಗದಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಜೋಗದ ಎಸ್​ವಿಪಿ ಕಾಲೋನಿಯಲ್ಲಿ ಗುಡ್ಡ ಕುಸಿತ ಉಂಟಾಗಿದೆ, ಇದರಿಂದ ಕೆಪಿಸಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

hill collapse in shivamogga kpc employees house
ಜೋಗದಲ್ಲಿ ಕೆಪಿಸಿ ಮನೆಗಳ ಮುಂದಿನ ಗುಡ್ಡ ಕುಸಿತ

By

Published : Sep 21, 2020, 8:23 PM IST

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಜೋಗದ ಎಸ್​ವಿಪಿ ಕಾಲೋನಿಯ ಕೆಪಿಸಿ ಮನೆಗಳ ಮುಂದಿನ ಗುಡ್ಡ ಕುಸಿತವಾಗಿದೆ.

ಜೋಗದಲ್ಲಿ ಕೆಪಿಸಿ ಮನೆಗಳ ಮುಂದಿನ ಗುಡ್ಡ ಕುಸಿತ

ಕೆಪಿಸಿಯ ನೌಕರರ ವಸತಿ ಗೃಹಗಳಲ್ಲಿ ಗುಡ್ಡ ರೀತಿ ತಗ್ಗು ಉಬ್ಬುಗಳಿವೆ. ಮನೆಗಳನ್ನು ಎತ್ತರ ಪ್ರದೇಶದಲ್ಲಿ ಕಟ್ಟಲಾಗಿದೆ. ಅಲ್ಲದೆ ಇದಕ್ಕೆ ತಡೆಗೋಡೆಯನ್ನು ಕಟ್ಟಲಾಗಿದೆ.

ಸದ್ಯ ಭಾರಿ ಮಳೆಗೆ ತಡೆಗೋಡೆ ಕುಸಿತವಾಗಿದೆ. ಇದರಿಂದ ಕೆಪಿಸಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮಳೆಗಾಲದಲ್ಲಿ ಈ ರೀತಿ ಗುಡ್ಡ ಕುಸಿತವಾಗುವುದು ಇಲ್ಲಿ ಸಾಮಾನ್ಯವಾಗಿದೆ.

ABOUT THE AUTHOR

...view details