ಶಿವಮೊಗ್ಗ: ಕೊರೊನಾ ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದ ಸಾಗರ ತಾಲೂಕಿನ ಹೆಗ್ಗೋಡಿನ ಚರಕ ಮಹಿಳಾ ವಿವಿದ್ಧೋದೇಶ ಸಹಕಾರ ಸಂಘಕ್ಕೆ ಶುಕ್ರವಾರ ಮರುಚಾಲನೆ ಸಿಕ್ಕಿದೆ.
ಲಾಕ್ಡೌನ್ನಿಂದ ಸ್ಥಗಿತವಾಗಿದ್ದ ಹೆಗ್ಗೋಡಿನ ಚರಕ ಮಹಿಳಾ ಸಂಘಕ್ಕೆ ಮರುಚಾಲನೆ - ಹೆಗ್ಗೋಡು ಚರಕ ಮಹಿಳಾ ಸಂಘ ಮರುಚಾಲನೆ
ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟದಲ್ಲಿದ್ದ ಹೆಗ್ಗೋಡಿನ ಚರಕ ಮಹಿಳಾ ವಿವಿದ್ಧೋದೇಶ ಸಹಕಾರ ಸಂಘಕ್ಕೆ ಗಾಂಧೀಜಿ ಜಯಂತಿ ದಿನ ಮರುಚಾಲನೆ ಸಿಕ್ಕಿದೆ.
ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟಕ್ಕೆ ಚರಕ ತುತ್ತಾಗಿತ್ತು. ಸರ್ಕಾರ ನೀಡಬೇಕಾದ ಹಣ ಬಾರದ ಕಾರಣ ಚರಕ ಸಂಘ ನಿಲ್ಲುವಂತಾಗಿತ್ತು. ಚರಕ ಸಂಘದ ಆವರಣದಲ್ಲಿ ಗಾಂಧಿ ಜಯಂತಿ, ಸಂಸ್ಥೆಯ ನೂತನ ಕಟ್ಡಡವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸಂಸದರು, ಚರಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಅಭಿನವ ಚನ್ನಬಸವ ಸ್ವಾಮೀಜಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕೈ ಮಗ್ಗ ಮತ್ತು ಜವಳಿ ಇಲಾಖೆಯ ಆಯುಕ್ತರಾದ ಡಾ.ಉಪೇಂದ್ರ ಪ್ರತಾಪ್ ಸಿಂಗ್, ಚರಕದ ಅಧ್ಯಕ್ಷೆ ಗೌರಮ್ಮ, ಕಾರ್ಯದರ್ಶಿ ಪ್ರತಿಭಾ ಸೇರಿದಂತೆ ಚರಕದ ಕಾರ್ಯಕರ್ತೆಯರು ಹಾಜರಿದ್ದರು.