ಶಿವಮೊಗ್ಗದಲ್ಲಿ ಮಳೆ ಹೆಚ್ಚಳ: ಏರಿಕೆಯತ್ತ ಸಾಗಿದ ಜಲಾಶಯಗಳ ನೀರಿನ ಮಟ್ಟ
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 332. 60 ಮಿ ಮಿ ಮಳೆಯಾಗಿದ್ದು, ಸರಾಸರಿ 47.51 ಮಿ ಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 764. 90 ಮಿ ಮಿ ಇದ್ದು, ಇದುವರೆಗೆ ಸರಾಸರಿ 408. 26 ಮಿ ಮಿ ಮಳೆ ದಾಖಲಾಗಿದೆ.
ತುಂಗಾನದಿ
By
Published : Jul 13, 2022, 8:48 PM IST
ಶಿವಮೊಗ್ಗ:ಜಿಲ್ಲೆಯ ಬಹುತೇಕ ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಹಳ್ಳ- ಕೊಳ್ಳಗಳು, ಕೆರೆ- ಕಟ್ಟೆಗಳಿಗೆ ಹೆಚ್ಚಿನ ನೀರು ಬಂದಿದೆ. ಕೃಷಿ ಚಟುವಟಿಕೆಗಳು ಕೂಡ ಮಲೆನಾಡಿನಲ್ಲಿ ಚುರುಕಾಗಿದೆ.
ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ:ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 332.60 ಮಿ ಮಿ ಮಳೆಯಾಗಿದ್ದು, ಸರಾಸರಿ 47.51 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 764.90 ಮಿಮಿ ಇದ್ದು, ಇದುವರೆಗೆ ಸರಾಸರಿ 408.26 ಮಿಮಿ ಮಳೆ ದಾಖಲಾಗಿದೆ.
ಶಿವಮೊಗ್ಗದಲ್ಲಿ ಮಳೆ ಹೆಚ್ಚಳದಿಂದ ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆ ಆಗಿದೆ
ಶಿವಮೊಗ್ಗ 23.20 ಮಿ ಮಿ, ಭದ್ರಾವತಿ 24. 30 ಮಿ ಮಿ, ತೀರ್ಥಹಳ್ಳಿ 92. 30 ಮಿ ಮಿ, ಸಾಗರ 61.10 ಮಿ ಮಿ, ಶಿಕಾರಿಪುರ 21. 20 ಮಿ ಮಿ, ಸೊರಬ 33.90 ಮಿ ಮಿ ಹಾಗೂ ಹೊಸನಗರ 76. 60 ಮಿ ಮಿ ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್ಗಳಲ್ಲಿ
ಜಲಾಶಯಗಳು
ಲಿಂಗನಮಕ್ಕಿ
ಭದ್ರಾ
ತುಂಗಾ
ಗರಿಷ್ಠ
1819
186
588.24
ಇಂದಿನ ಮಟ್ಟ
1784.8
180.2
586.81
ಒಳಹರಿವು
53412.00
40920.00
49104.00
ಹೊರಹರಿವು
0.0
156.00
51053.00
ಕಳೆದ ವರ್ಷ ನೀರಿನ ಮಟ್ಟ
1784.7
156.8
588.24
ಒಟ್ಟಾರೆ, ಮಲೆನಾಡು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಸಾಕಷ್ಟು ಅನಾಹುತಗಳನ್ನು ಸೃಷ್ಟಿ ಮಾಡಿದೆ. ಜಿಲ್ಲೆಯಲ್ಲಿ ಒಟ್ಟು 168 ಮನೆಗಳು ಬಾಗಶಃ ಹಾಗೂ 21 ಮನೆಗಳು ಸಂಪೂರ್ಣ ಹಾನಿಯಾಗಿವೆ. ಇಲ್ಲಿಯವರೆಗೆ ಒಂದು ಸಾವು ಸಂಭವಿಸಿದ್ದು, 17 ಧನಕರುಗಳು ಮೃತಪಟ್ಟಿವೆ.