ಶಿವಮೊಗ್ಗ: ಮಲೆನಾಡಿನ ಭಾಗವಾದ ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ತಾಲೂಕಿನ 100ಕ್ಕೂ ಅಧಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ತಾಲೂಕಿನ ಮಂಡಗದ್ದೆ, ಆಗುಂಬೆ ಹೋಬಳಿಯಲ್ಲಿ ಎಡೆಬಿಡದೆ ವರ್ಷಧಾರೆಯಾಗುತ್ತಿದೆ. ಶಾಲೆಗಳಿಗೆ ರಜೆ ನೀಡುವ ಅಧಿಕಾರವನ್ನು ಆಯಾ ಶಾಲೆಯ ಎಸ್ಡಿಎಂಸಿ ಅವರಿಗೆ ನೀಡಲಾಗಿದೆ. ಎಸ್ ಡಿಎಂಸಿ ಹಾಗೂ ಶಾಲೆಯ ಶಿಕ್ಷಕರು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಿದ್ದಾರೆ ಎಂದು ತೀರ್ಥಹಳ್ಳಿ ಬಿಇಒ ಗಣೇಶ್.ವೈ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ನಿರಂತವಾಗಿ ಮಳೆ ಸುರಿಯುತ್ತಿದೆ. ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ವಾಗಿದೆ. ತುಂಗಾ ಜಲಾಶಯಕ್ಕೆ ಒಳ ಹರಿವು ಕೂಡಾ ಹೆಚ್ಚಾಗಿದೆ. ಅಣೆಕಟ್ಟೆಯ 16 ಕ್ರೆಸ್ಟ್ ಗೇಟ್‌ಗಳಿಂದ ನದಿಗೆ ನೀರು ಹರಿಸಲಾಗುತ್ತಿದೆ. 18 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿದು ಬರುತ್ತಿದೆ. ಸಾಗರ, ಹೊಸನಗರ ತಾಲೂಕಿನಲ್ಲೂ ಮಳೆ ಅಬ್ಬರ ಜೋರಾಗಿದೆ.
ಇದನ್ನೂ ಓದಿ:ಭದ್ರಾ ಅಣೆಕಟ್ಟೆಯಿಂದ ನೀರು ಬಿಡುಗಡೆ: ಭದ್ರಾವತಿ ಹೊಸ ಸೇತುವೆ ಮುಳುಗಡೆ
ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಸುರಿದ ಮಳೆಯ ವಿವರ:
- ಶಿವಮೊಗ್ಗ- 13.30 ಎಂ.ಎಂ.
- ಭದ್ರಾವತಿ- 11.20 ಎಂ.ಎಂ.
- ತೀರ್ಥಹಳ್ಳಿ- 71.80 ಎಂ.ಎಂ
- ಸಾಗರ- 86.80 ಎಂ.ಎಂ.
- ಹೊಸನಗರ-79.30 ಎಂ.ಎಂ.
- ಸೊರಬ-39.40 ಎಂ.ಎಂ.
- ಶಿಕಾರಿಪುರ- 21.60 ಎಂ.ಎಂ.
ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ:
ತುಂಗಾ ಅಣೆಕಟ್ಟು:
- ಗರಿಷ್ಟ ಮಟ್ಟ- 584.24 ಅಡಿ
- ಇಂದಿನ ನೀರಿನ ಮಟ್ಟ-584.24 ಅಡಿ
- ಒಳ ಹರಿವು-18,000 ಕ್ಯೂಸೆಕ್
- ಹೊರ ಹರಿವು- 18,000 ಕ್ಯೂಸೆಕ್