ಶಿವಮೊಗ್ಗ:ನಗರದಲ್ಲಿ ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ ಸುರಿದ ಭಾರಿ ಮಳೆಯಿಂದ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ದಿಢೀರ್ ಮಳೆಗೆ ನಗರದ ಅಣ್ಣಾ ನಗರ ಬಡವಾಣೆಯ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಮನೆಯಲ್ಲಿದ್ದ ದಿನಸಿ ಸಾಮಗ್ರಿಗಳು ಮತ್ತು ಎಲೆಕ್ಟ್ರಿಕ್ ಉಪಕರಣಗಳು ಹಾಳಾಗದಂತೆ ಇಡೀ ರಾತ್ರಿ ಮನೆಯವರೆಲ್ಲ ಜಾಗ್ರತೆವಹಿಸಿದ್ದಲ್ಲದೇ ಬೆಳಗಿನವರೆಗೆ ಮನೆಗೆ ನುಗ್ಗಿದ ನೀರನ್ನು ಹೊರ ಹಾಕುವಂತಾಗಿದೆ.
ರಾತ್ರಿ ಸುರಿದ ದಿಢೀರ್ ಮಳೆ: ಮನೆಗಳಿಗೆ ನುಗ್ಗಿದ ನೀರು.. - Etv Bharat kannada
ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ಭಾರಿ ಮಳೆಯಾಗಿದ್ದು, ಅಣ್ಣಾ ನಗರ ಬಡಾವಣೆಯಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿವೆ.

ಮನೆಗಳಿಗೆ ನುಗ್ಗಿದ ಮಳೆ ನೀರು
ಮನೆಗಳಿಗೆ ನುಗ್ಗಿದ ಮಳೆ ನೀರು
ಪಾಲಿಕೆಗೆ ಹಿಡಿ ಶಾಪ ಹಾಕಿದ ಜನತೆ:ಕಳೆದ ಎರಡಮೂರು ವರ್ಷ್ಗಗಳಿಂದ ನಾವು ಈ ಸಮಸ್ಯೆ ಅನುಭವಿಸುತ್ತಿದ್ದೆವೆ. ಪಾಲಿಕೆಯ ಅಧಿಕಾರಿಗಳಿಗೆ ತಿಳಿಸಿದ್ರು ಪ್ರಯೋಜನವಾಗಿಲ್ಲ. ಮನೆಗೆ ನೀರು ನುಗ್ಗದಂತೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲೂ ಮಂಕಿಪಾಕ್ಸ್ ಗುಣಲಕ್ಷಣ ಹೊಂದಿರುವ ವ್ಯಕ್ತಿ ಪತ್ತೆ