ಕರ್ನಾಟಕ

karnataka

ETV Bharat / state

ಹೊಸನಗರದಲ್ಲಿ 292 ಮಿಮೀ ಮಳೆ: ಧುಮ್ಮಿಕ್ಕುತ್ತಿರುವ ಜೋಗ ಜಲಪಾತ

ಹೊಸನಗರ ಭಾಗದಲ್ಲಿ ಹೆಚ್ಚು‌ ಮಳೆಯಾಗುತ್ತಿರುವುದರಿಂದ ಜೋಗ ಜಲಪಾತದಲ್ಲಿ ಶರಾವತಿ ನದಿ ಬೋರ್ಗರೆದು ಧುಮ್ಮುಕ್ಕಿ ಹರಿಯುತ್ತಿದ್ದಾಳೆ.

DAM
ಜಲಾಶಯ

By

Published : Jun 18, 2021, 3:43 PM IST

ಶಿವಮೊಗ್ಗ: ಜಿಲ್ಲೆಯಲ್ಲಿ ಮೃಗಶಿರ ಮಳೆ ಜೋರಾಗಿ ಸುರಿಯುತ್ತಿದೆ. ಪ್ರತಿವರ್ಷ ಅತಿ ಹೆಚ್ಚು ಮಳೆ ಸುರಿಯುವ ಹೊಸನಗರ ತಾಲೂಕಿನಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 292 ಮಿಮೀ ಮೀಟರ್ ಮಳೆಯಾಗಿದೆ. ಪರಿಣಾಮ ಲಿಂಗನಮಕ್ಕಿ ಜಲಾಶಯಕ್ಕೆ ಇಂದು 45.413 ಕ್ಯೂಸೆಕ್ ನೀರು ಒಳ ಹರಿವು ಬಂದಿದೆ. ಶರಾವತಿ ಹಿನ್ನೀರಿನ ಪ್ರದೇಶದಲ್ಲಿ 217 ಮಿಮೀ ಮಳೆಯಾಗಿದೆ. ಜೋಗ ಜಲಪಾತದಲ್ಲಿ ಶರಾವತಿ ನದಿ ಭೋರ್ಗರೆದು ಧುಮ್ಮಿಕ್ಕಿ ಹರಿಯುತ್ತಿದೆ.

ಹೊಸನಗರದಲ್ಲಿ ದಾಖಲೆಯ 292 ಮಿ ಮಿ ಮಳೆ

ಕಳೆದ‌ 24 ಗಂಟೆಯಲ್ಲಿ ತಾಲೂಕುವಾರು ಮಳೆ ವರದಿ ಇಂತಿದೆ:

ಶಿವಮೊಗ್ಗ-28 ಮಿಮೀ
ಭದ್ರಾವತಿ-27.20 ಮಿಮೀ
ತೀರ್ಥಹಳ್ಳಿ-123.20 ಮಿಮೀ
ಸಾಗರ-66.20 ಮಿಮೀ
ಶಿಕಾರಿಪುರ- 35 ಮಿಮೀ
ಸೊರಬ-76.20 ಮಿಮೀ
ಹೊಸನಗರ-292.40 ಮಿಮೀ

ಜಿಲ್ಲೆಯಲ್ಲಿ ಸರಾಸರಿ 92.60 ಮಿಮೀ ಮಳೆಯಾಗಿದೆ.

ಜಲಾಶಯಗಳ ನೀರಿನ ಮಟ್ಟ:

ತುಂಗಾ ಜಲಾಶಯ

ಗರಿಷ್ಠ ಮಟ್ಟ- 588.24 ಮೀಟರ್

ಇಂದಿನ ನೀರಿನ ಮಟ್ಟ- 588.24 ಮೀಟರ್

ಜಲಾಶಯದ ಒಳ ಹರಿವು- 31.277 ಕ್ಯೂಸೆಕ್

ಹೊರ ಹರಿವು-31.277 ಕ್ಯೂಸೆಕ್

ಕಳೆದ ವರ್ಷ-588.24 ಮೀಟರ್

ಭದ್ರಾ ಜಲಾಶಯ:

ಗರಿಷ್ಠ ಮಟ್ಟ-186 ಅಡಿ

ಇಂದಿನ ಜಲಾಶಯದ ನೀರಿನ ಮಟ್ಟ-146.60 ಅಡಿ

ಒಳ ಹರಿವು-21.598 ಕ್ಯೂಸೆಕ್

ಹೊರ ಹರಿವು- ಇಲ್ಲ

ಕಳೆದ ವರ್ಷ- 135 ಅಡಿ

ಲಿಂಗನಮಕ್ಕಿ ಜಲಾಶಯ:

ಗರಿಷ್ಠ ಮಟ್ಟ-1819 ಅಡಿ

ಇಂದಿನ ನೀರಿನ ಮಟ್ಟ-1781.45 ಅಡಿ

ಒಳ ಹರಿವು-45.413 ಕ್ಯೂಸೆಕ್

ಹೊರ ಹರಿವು-2.017 ಕ್ಯೂಸೆಕ್ (ವಿದ್ಯುತ್ ಉತ್ಪಾದನೆಗೆ)

ಕಳೆದ ವರ್ಷ-1760.20 ಅಡಿ


ಓದಿ:ರಾಜ್ಯದಲ್ಲಿ ನಾಯಕತ್ವದ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ: ಸಿಎಂ ಯಡಿಯೂರಪ್ಪ

ABOUT THE AUTHOR

...view details