ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಮುಂದುವರಿದ ವರುಣನ ಅಬ್ಬರ: ಮನೆ ಕುಸಿತ!

ಶಿವಮೊಗ್ಗ ಜಿಲ್ಲೆಯಲ್ಲಿ ವರುಣನ ಅಬ್ಬರ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಾರ್ಭಟಕ್ಕೆ ಸಾಗರ ಪಟ್ಟಣದ ರಾಮನಗರದಲ್ಲಿ ಮನೆವೊಂದು ಕುಸಿತವಾಗಿದೆ.

house destroyed due to rain
ವರುಣನ ಅಬ್ಬರಕ್ಕೆ ಮನೆ ಕುಸಿತ

By

Published : Jul 21, 2021, 7:49 AM IST

Updated : Jul 21, 2021, 8:26 AM IST

ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ವರುಣನ ಅಬ್ಬರ ಜೋರಾಗಿದೆ. ಪರಿಣಾಮ, ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿವೆ. ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ. ಜನ ಜೀವನವನ್ನು ಅಸ್ಥವ್ಯಸ್ಥಗೊಂಡಿದ್ದು, ಮನೆಯೊಂದು ಉರುಳಿದೆ.

ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಸುರಿಯುವ ಹೊಸನಗರ ತಾಲೂಕಿನಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ (ನಿನ್ನೆಗೆ) 12 ಮಿಲಿ ಮೀಟರ್ ಮಳೆಯಾಗಿದೆ. ಹೊಸನಗರದಲ್ಲಿ ಮಳೆ ಹೆಚ್ಚಾಗಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ನಿನ್ನೆ 21.274 ಕ್ಯೂಸೆಕ್ ನೀರು ಒಳ ಹರಿವು ಬಂದಿದೆ. ಶರಾವತಿ ಹಿನ್ನೀರಿನ ಪ್ರದೇಶದಲ್ಲಿ 117.2 ಮೀ.ಮೀಟರ್ ಮಳೆಯಾಗಿದೆ. ಹೊಸನಗರ ಭಾಗದಲ್ಲಿ ಹೆಚ್ಚು‌ ಮಳೆಯಾಗುತ್ತಿರುವುದರಿಂದ ಜೋಗ ಜಲಪಾತದಲ್ಲಿ ಶರಾವತಿ ನದಿ ಬೋರ್ಗರೆದು ಧುಮ್ಮುಕ್ಕಿ ಹರಿಯುತ್ತಿದ್ದಾಳೆ.

ಶಿವಮೊಗ್ಗದಲ್ಲಿ ಮುಂದುವರಿದ ವರುಣನ ಅಬ್ಬರ

ಜಲಾಶಯಗಳ ನೀರಿನ ಮಟ್ಟ

ತುಂಗಾ ಜಲಾಶಯ:

  • ಗರಿಷ್ಠ ಮಟ್ಟ- 588.24 ಮೀಟರ್.
  • ನಿನ್ನೆಯ ನೀರಿನ ಮಟ್ಟ- 588.24 ಮೀಟರ್
  • ಜಲಾಶಯದ ಒಳ ಹರಿವು- 25.316 ಕ್ಯೂಸೆಕ್.
  • ಹೊರ ಹರಿವು-25.316 ಕ್ಯೂಸೆಕ್.
  • ಕಳೆದ ವರ್ಷ-588.24 ಮೀಟರ್.

ಭದ್ರಾ ಜಲಾಶಯ:

  • ಗರಿಷ್ಠ ಮಟ್ಟ-186 ಅಡಿ.
  • ನಿನ್ನೆಯ ಜಲಾಶಯದ ನೀರಿನ ಮಟ್ಟ-165.7 ಅಡಿ.
  • ಒಳ ಹರಿವು -12.355 ಕ್ಯೂಸೆಕ್.
  • ಹೊರ ಹರಿವು- 793.
  • ಕಳೆದ ವರ್ಷ- 152.4 ಅಡಿ.

ಲಿಂಗನಮಕ್ಕಿ ಜಲಾಶಯ:

  • ಗರಿಷ್ಠ ಮಟ್ಟ-1819 ಅಡಿ.
  • ನಿನ್ನೆಯ ನೀರಿನ ಮಟ್ಟ-1793.9 ಅಡಿ.
  • ಒಳ ಹರಿವು-21.274 ಕ್ಯೂಸೆಕ್.
  • ಹೊರ ಹರಿವು-2.338.21 ಕ್ಯೂಸೆಕ್( ವಿದ್ಯುತ್ ಉತ್ಪಾದನೆಗೆ)
  • ಕಳೆದ ವರ್ಷ-1770.60 ಅಡಿ.

ಭಾರಿ ಮಳೆಗೆ ಸಾಗರದಲ್ಲಿ ಮನೆ ಕುಸಿತ:

ಸಾಗರ ಪಟ್ಟಣದ ರಾಮನಗರದಲ್ಲಿ ಮನೆವೊಂದು ಕುಸಿತವಾಗಿದೆ. ರಾಮನಗರದ ನಿವಾಸಿ ಶಾಹೀದ್ ಎಂಬುವರ ಮನೆ ನಿನ್ನೆ ಬೆಳ್ಳಗ್ಗೆ ಕುಸಿತವಾಗಿದೆ. ಶಾಹೀದ್ ಅವರ ಹೆಂಡತಿ ಮತ್ತು ಮಕ್ಕಳು ಮನೆಯಲ್ಲಿದ್ದರು. ಸದ್ಯ ಮಳೆಯಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ಅಧಿಕಾರಿಗಳು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

Last Updated : Jul 21, 2021, 8:26 AM IST

ABOUT THE AUTHOR

...view details