ಶಿವಮೊಗ್ಗ: ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ರಾಜಕಾಲುವೆ ಉಕ್ಕಿ ಹರಿದ ಪರಿಣಾಮ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿಯನ್ನುಂಟು ಮಾಡಿದೆ.
ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ ಮಧ್ಯ ಭಾಗದಲ್ಲಿ ಹರಿಯುವ ರಾಜ ಕಾಲುವೆಯು ಮಳೆಯಿಂದ ತುಂಬಿ ಉಕ್ಕಿ ಹರಿದಿದೆ. ಇದರಿಂದ ಸುತ್ತಮುತ್ತಲಿನ ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಪರಿಣಾಮ ಮನೆಯ ಗೃಹಪಯೋಗಿ ವಸ್ತುಗಳು ನೀರಿನಲ್ಲಿ ಮುಳುಗಿ ಹೋಗಿವೆ. ಅಲ್ಲದೇ, ಮನೆಗಳಲ್ಲಿ ಮೂರು ಅಡಿ ನೀರು ನಿಂತು ಸಾಕಷ್ಟು ಹಾನಿಯನ್ನುಂಟು ಮಾಡಿದೆ.
ಶಿವಮೊಗ್ಗದಲ್ಲಿ ಧಾರಾಕಾರ ಮಳೆ..ರಾಜಕಾಲುವೆ ತುಂಬಿ ಮನೆಗಳಿಗೆ ನುಗ್ಗಿದ ನೀರು! ಈ ಸುದ್ದಿಯನ್ನೂ ಓದಿ:ಉಡುಪಿಯಾದ್ಯಂತ ಗುಡುಗು ಸಿಡಿಲು ಸಹಿತ ಭಾರಿ ಮಳೆ: ಹೋಟೆಲ್ ಬೆಂಕಿಗಾಹುತಿ..
ಮಳೆ ಸೃಷ್ಟಿಸಿದ ಅವಾಂತರದಿಂದಾಗಿ ಸ್ಥಳೀಯರು ರಾತ್ರಿ ಜಾಗರಣೆ ಮಾಡುವಂತಾಗಿತ್ತು. ರಾಜಕಾಲುವೆ ಸರಿ ಪಡಿಸಬೇಕೆಂದು ಈ ಭಾಗದ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ಸೇರಿದಂತೆ ಸ್ಥಳೀಯರು ಮನವಿ ಸಲ್ಲಿಸಿದರು ಕೂಡ ಪಾಲಿಕೆ ಮೇಯರ್ ಹಾಗೂ ಆಯುಕ್ತರು ಸ್ಪಂದಿಸಿಲ್ಲವಂತೆ. ಸದ್ಯ ಮಳೆ ಕೊಂಚ ಕಡಿಮೆಯಾಗಿದೆ. ಆದ್ರೆ ಇನ್ನೂ ಕೂಡ ರಾಜಕಾಲುವೆಯಲ್ಲಿ ನೀರು ಜೋರಾಗಿ ಹರಿಯುತ್ತಿದೆ. ನೀರು ನುಗ್ಗಿ ಹಾನಿಗೊಳಗಾದ ವಸ್ತುಗಳನ್ನು ಸರಿಪಡಿಸಿ ಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.