ಶಿವಮೊಗ್ಗ: ನಗರದ್ಯಾಂತ ಭಾರೀ ಮಳೆ ಹಿನ್ನೆಲೆ ಶಿವಮೊಗ್ಗದ ಮಹಾನಗರ ಪಾಲಿಕೆಯ ಆಯುಕ್ತರು ಮುಂಜಾನೆಯಿಂದ ತಮ್ಮ ಎಲ್ಲಾ ಶಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೊತೆ ಮಾತುಕತೆ ನಡೆಸಿ ಮಳೆಯಿಂದ ಸಮಸ್ಯೆಗೊಳಗಾದ ಎಲ್ಲಾ ನಗರಗಳನ್ನು ವೀಕ್ಷಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.
ಪ್ರಮುಖವಾಗಿ ತುಂಗಾನಗರ, ಟಿಪ್ಪುನಗರ, ಗಾಂಧಾರಿನಗರ, ಆರ್.ಎಂ.ಎಲ್ ನಗರ, ಶಾರವತಿ ನಗರ, ಬಾಪೂಜಿನಗರ, ಹೊಳೆ ಬಸ್ ಸ್ಟಾಪ್ ಹತ್ತಿರ, ಸವಾಯಿಪಾಳ್ಯ, ಲಕ್ಕೊಳ್ಳಿ ಡ್ಯಾಂ ಬಳಿ, ವಿನೋಬನಗರ ಹಾಗೂ ಸಾಕಷ್ಟು ಕಾಲೋನಿಗಳು ಮತ್ತು ಮನೆಗಳಿಗೆ ನೀರು ನುಗ್ಗಿದ್ದರಿಂದಾಗಿ ಜನರ ಸಮಸ್ಯೆಗಳನ್ನು ಪರಿಶೀಲನೆ ಮಾಡಿ, ಉರುಳಿ ಬೀಳುವಂತಿರುವ ಮನೆಗಳಲ್ಲಿರುವವರನ್ನು ಗಂಜಿ ಕೇಂದ್ರದೆಡೆಗೆ ಕರೆದೊಯ್ಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಹಾನಗರಪಾಲಿಕೆ ಅಧಿಕಾರಿಗಳಿಗೆ ನೀಡಿರುವ ಆದೇಶಗಳು:
1.ಎಲ್ಲಾ ಆರೋಗ್ಯಾಧಿಕಾರಿಗಳು, ಅಭಿಯಂತರರು, ರೆವಿನ್ಯೂ ಅಧಿಕಾರಿಗಳು ಮತ್ತು ಎಲ್ಲಾ ಶಾಖೆಯ ಮುಖ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಕೂಡಲೇ ತಮಗೆ ಸಂಬಂಧಿಸಿದ ಎಲ್ಲಾ ವಾರ್ಡ್ಗಳಿಗೂ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ನಿಯಂತ್ರಿಸತಕ್ಕದ್ದು ಮತ್ತು ಅಗತ್ಯ ಕ್ರಮ ಕೈಗೊಳ್ಳತಕ್ಕದ್ದು.