ಕರ್ನಾಟಕ

karnataka

ETV Bharat / state

ಮೃಗಶಿರ ಮಳೆಗೆ ಮಲೆನಾಡು ತತ್ತರ: ಹೊಸನಗರದಲ್ಲಿ 170 ಮಿ.ಮೀ ಮಳೆ, ತುಂಗಾ ಡ್ಯಾಮ್​ ಭರ್ತಿ - ಲಿಂಗನಮಕ್ಕಿ ಅಣೆಕಟ್ಟು

ಮಲೆನಾಡಲ್ಲಿ ಮಳೆಯಾರ್ಭಟ ಜೋರಾಗಿದ್ದು, ಕಳೆದ ಐದು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಜಿಲ್ಲೆಯ ಹಲವು ಜಲಾಶಯಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದೆ.

heavy-rain-fall-several-taluks-of-shivamogga-district
ಮೃಗಶಿರ ಮಳೆಗೆ ಮಲೆನಾಡು ತತ್ತರ

By

Published : Jun 16, 2021, 4:21 PM IST

Updated : Jun 16, 2021, 4:27 PM IST

ಶಿವಮೊಗ್ಗ: ಜಿಲ್ಲೆಯಲ್ಲಿ ಮೃಗಶಿರ ಮಳೆ ಆರ್ಭಟಿಸುತ್ತಿದ್ದು, ಜನ-ಜೀವನ ಅಸ್ತವ್ಯಸ್ತಗೊಳಿಸಿದೆ. ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿರುವುದರಿಂದ ನದಿ ಹರಿವಿನ ಮಟ್ಟ ಏರಿಕೆಯಾಗಿದೆ. ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಕಳೆದ 24 ಗಂಟೆಯಲ್ಲಿ 170 ಮಿ.ಮೀ ಮಳೆಯಾಗಿದೆ.

ಇದರಿಂದ ಶರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಲಿಂಗನಮಕ್ಕಿ ಅಣೆಕಟ್ಟೆಗೆ 20,857 ಕ್ಯೂಸೆಕ್ ನೀರು ಒಳಹರಿವು ಬರುತ್ತಿದೆ. ಜಲಾಶಯದ ಇಂದಿನ ನೀರಿನ ಮಟ್ಟ 1777.80ಕ್ಕೆ ತಲುಪಿದೆ. ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯಲ್ಲಿ 118 ಮಿ.ಮೀ, ಯಡೂರಿನಲ್ಲಿ 148 ಮಿ.ಮೀ, ಮಾಣಿಯಲ್ಲಿ 117 ಮಿ.ಮೀ, ಹುಲಿಕಲ್​​​ನಲ್ಲಿ 114 ಮಿ.ಮೀ ಮಳೆ ದಾಖಲಾಗಿದೆ.

ಮೃಗಶಿರ ಮಳೆಗೆ ಮಲೆನಾಡು ತತ್ತರ

ಬಿಟ್ಟುಬಿಡದೆ ಮಳೆ ಸುರಿಯುತ್ತಿರುವುದರಿಂದ ಹೊಸನಗರ ಪಟ್ಟಣದ ಕೃಷ್ಣ ಭವನ ಸರ್ಕಲ್​ನಲ್ಲಿನ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ತುಂಗಾ ಅಣೆಕಟ್ಟೆ ಭರ್ತಿಯಾಗಿದ್ದು, ಇಂದು ನದಿಗೆ 19 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ಜಿಲ್ಲೆಯ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ:

ತುಂಗಾ ಅಣೆಕಟ್ಟು -588.25 ಮೀಟರ್ ಎತ್ತರ-18,000 ಕ್ಯೂಸೆಕ್ ನೀರು ಒಳ ಹರಿವು, 19,000 ಕ್ಯೂಸೆಕ್ ನೀರು ಹೊರ ಹರಿವಿದೆ.

ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ- 1819 ಅಡಿ. ಒಳಹರಿವು-20,857 ಕ್ಯೂಸೆಕ್ ಇದ್ದರೆ, ಹೊರಹರಿವು-2,756 ಕ್ಯೂಸೆಕ್​ನಷ್ಟಿದೆ.

ಭದ್ರಾ ಅಣೆಕಟ್ಟುನ ಒಟ್ಟು ನೀರಿನ ಮಟ್ಟ-186 ಅಡಿ, ಇಂದಿನ‌ ನೀರಿನ ಮಟ್ಟ- 142.6, ಒಳ‌ಹರಿವು-10.958 ಇದ್ದರೆ ಒಳಹರಿವು-67 ಕ್ಯೂಸೆಕ್ ಆಗಿದೆ.

ಓದಿ:ನಿಂತ ಮಳೆ ನೀರಿನಲ್ಲಿಯೇ ಮಲಗಿ ಪ್ರತಿಭಟನೆ ನಡೆಸಿದ ಸಾಮಾಜಿಕ ಹೋರಾಟಗಾರ!

Last Updated : Jun 16, 2021, 4:27 PM IST

ABOUT THE AUTHOR

...view details