ಶಿವಮೊಗ್ಗ:ಜಿಲ್ಲೆಯಲ್ಲಿ ಮತ್ತೆ ಮಳೆ ಹಾವಳಿ ಮುಂದವರೆದಿದೆ. ಇಂದು ಸುರಿದ ಮಳೆಯಿಂದ ಸಾಗರ ತಾಲೂಕಿನ ಗೌತಮಪುರ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ.
ಶಿವಮೊಗ್ಗದಲ್ಲಿ ಮುಂದುವರಿದ ಮಳೆಯ ಆರ್ಭಟ: ಮನೆಗಳು ಜಲಾವೃತ, ಜನರಿಗೆ ಸಂಕಷ್ಟ - Heavy rain at Shimoga
ಸತತ ಮೂರು ಗಂಟೆಗಳ ಕಾಲ ಬಂದ ಮಳೆಗೆ ಗ್ರಾಮದ ರಸ್ತೆಯಲ್ಲಿ ಮೂರು ಅಡಿ ನೀರು ಹರಿದಿದೆ. ಇದರಿಂದ ಮನೆಯ ವಸ್ತುಗಳು ನೀರಿನಲ್ಲಿ ತೇಲಿದ್ದು, ಮಳೆ ಕಡಿಮೆಯಾಗುತ್ತಿದಂತೆ ಮನೆಯಿಂದ ಜನರು ನೀರನ್ನು ಹೊರ ಹಾಕಿದ್ದಾರೆ.
ಶಿವಮೊಗ್ಗದಲ್ಲಿ ಮುಂದುವರೆದ ಮಳೆಯ ಆರ್ಭಟ
ಸತತ ಮೂರು ಗಂಟೆಗಳ ಕಾಲ ಬಂದ ಮಳೆಗೆ ಗ್ರಾಮದ ರಸ್ತೆಯಲ್ಲಿ ಮೂರು ಅಡಿ ನೀರು ಹರಿದಿದೆ. ಇದರಿಂದ ಮನೆಯ ವಸ್ತುಗಳು ನೀರಿನಲ್ಲಿ ತೇಲಿದ್ದು, ಮಳೆ ಕಡಿಮೆಯಾಗುತ್ತಿದಂತೆ ಮನೆಯಿಂದ ಜನರು ನೀರನ್ನು ಹೊರ ಹಾಕಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿ ಭಾಗದಲ್ಲಿ ಬೆಳಗ್ಗೆಯಿಂದಲೇ ಮಳೆ ಸುರಿಯುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದು, ಅಣೆಕಟ್ಟೆಯಿಂದ 15 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.