ಕರ್ನಾಟಕ

karnataka

ETV Bharat / state

ತುಂಬಿದ ಹಾಯ್ ಹೊಳೆ ಕೆರೆ: ಶಾಸಕ ಅಶೋಕ‌ ನಾಯ್ಕ ಬಾಗಿನ - MLA Asoka Nayaka offers bagina

ಶಿವಮೊಗ್ಗ ತಾಲೂಕಿನ ಹಾಯ್ ಹೊಳೆ ಕೆರೆ ತುಂಬಿದ್ದರಿಂದ ಇಂದು ಶಾಸಕ ಅಶೋಕ್ ನಾಯ್ಕ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.

ಶಾಸಕ ಅಶೋಕ‌ನಾಯ್ಕರಿಂದ ಬಾಗಿನ
ಶಾಸಕ ಅಶೋಕ‌ನಾಯ್ಕರಿಂದ ಬಾಗಿನ

By

Published : Aug 27, 2020, 5:24 PM IST

ಶಿವಮೊಗ್ಗ:ತಾಲೂಕು‌ ಕಾಡಂಚಿನ ಹಾಯ್ ಹೊಳೆ ಗ್ರಾಮದ ಕೆರೆಗೆ ಇಂದು ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ ಅವರು ಬಾಗಿನ ಅರ್ಪಿಸಿದರು.

ತುಂಗಾ ನದಿಯಿಂದ ಏತ‌ ನೀರಾವರಿಯ ಮೂಲಕ ಕೆರೆಯನ್ನು ತುಂಬಿಸಲಾಗುತ್ತಿದೆ. ಇದರಿಂದ ತುಂಬಿದ ಹಾಯ್ ಹೊಳೆ ಕೆರೆಗೆ ಇಂದು ಶಾಸಕರು ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. ಈ ಕೆರೆಯು ಸುಮಾರು 8 ಗ್ರಾಮಗಳ 1,200 ಎಕರೆ ಭೂಮಿಗೆ ನೀರು ಪೂರೈಕೆ ಮಾಡುತ್ತದೆ. ಈ ಕೆರೆಯ ಎಡ ಮತ್ತು ಬಲ ಕಾಲುವೆಗಳಿಂದ ನೀರನ್ನು ಹಾಯಿಸಲಾಗುತ್ತಿದೆ. ಕೆರೆ ತುಂಬಿದ್ರೆ, ಈ ಭಾಗದ ರೈತರು ಎರಡು ಬೆಳೆಯನ್ನು ತೆಗೆಯಬಹುದಾಗಿದೆ. ಇಲ್ಲಿ ಹೆಚ್ಚಿನ ರೈತರು ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದಾರೆ.

ಶಾಸಕ ಅಶೋಕ‌ನಾಯ್ಕರಿಂದ ಬಾಗಿನ

ಶಾಸಕ ಅಶೋಕ ನಾಯ್ಕ ಅವರು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ, ಕೆರೆಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. ಈ ಕೆರೆಯು ಪ್ರತಿ ವರ್ಷ ಇದೇ ರೀತಿ ತುಂಬುತ್ತಿರಲಿ ಎಂದು ಪ್ರಾರ್ಥಿಸಿದರು. ಶಿವಮೊಗ್ಗದ ಹರಕರೆ ಬಳಿ ತುಂಗಾ ನದಿಯಿಂದ ಹಾಯ್ ಹೊಳೆ, ಬಾರೆಹಳ್ಳ ಹಾಗೂ ಗೌಡನ ಕೆರೆಗೆ ಏತ ನೀರಾವರಿ ಮೂಲಕ ನೀರು ಹಾಯಿಸಲಾಗುತ್ತಿದೆ.

ABOUT THE AUTHOR

...view details