ಶಿವಮೊಗ್ಗ: ಜಾಮೀನುದಾರ ರೈತನಿಗೆ ಶಿಕಾರಿಪುರದ ಕರ್ನಾಟಕ ಬ್ಯಾಂಕ್ ಶಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಆರೋಪಿಸಿದ್ದಾರೆ.
ಕರ್ನಾಟಕ ಬ್ಯಾಂಕ್ನಿಂದ ಕಿರುಕುಳ: ಹಸಿರು ಸೇನೆ ಆರೋಪ - ಶಿವಮೊಗ್ಗ
ರೈತನಿಗೆ ಶಿಕಾರಿಪುರದ ಕರ್ನಾಟಕ ಬ್ಯಾಂಕ್ ಶಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಆರೋಪಿಸಿದೆ.
ಕರ್ನಾಟಕ ಬ್ಯಾಂಕ್ನಿಂದ ಕಿರುಕುಳ:
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಕಾರಿಪುರದ ಕರ್ನಾಟಕ ಬ್ಯಾಂಕ್ನಲ್ಲಿ ಯಂಗಪ್ಪ ನಾಯ್ಡು ಎಂಬುವರು ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಸುಮಾರು 15 ಲಕ್ಷ ರೂ. ಸಾಲ ತೆಗೆದುಕೊಂಡಿದ್ದರು. 2011ರಲ್ಲಿ ಸಾಲಗಾರ ಕೃಷಿಕ ಮರಣ ಹೊಂದಿದ್ದಾರೆ. ಈಗ ಬ್ಯಾಂಕಿನವರು ಜಾಮಿನುದಾರನಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸಮಸ್ಯೆ ಬಗೆಹರಿಸದೆ ಹೋದರೆ ಆಗಸ್ಟ್ 4 ರಂದು ಕರ್ನಾಟಕ ಬ್ಯಾಂಕ್ ಮುಖ್ಯ ಶಾಖೆಗೆ ರೈತ ಸಂಘಟನೆ ವತಿಯಿಂದ ಮುತ್ತಿಗೆ ಹಾಕಲಾಗುತ್ತದೆ ಎಂದು ಎಚ್ಚರಿಸಿದರು.